ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ನಟ ಶಿವರಾಜ್ ಕೆಆರ್ ಪೇಟೆ ಅವರು ‘ಹವಾಮಾನ ವರದಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಶರತ್ ಚಕ್ರವರ್ತಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹರಿಪ್ರಸಾದ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕೆಆರ್ ಪೇಟೆ ಅವರು ಮಾತನಾಡಿದರು.
ನಟ ಶಿವರಾಜ್ ಕೆಆರ್ ಪೇಟೆ ಅವರು ‘ಹವಾಮಾನ ವರದಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶರತ್ ಚಕ್ರವರ್ತಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹರಿಪ್ರಸಾದ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವರಾಜ್ ಕೆಆರ್ ಪೇಟೆ ಅವರು ಮಾತನಾಡಿದರು. ‘ನನ್ನ ಮತ್ತು ಹರಿ ಅವರ 19 ವರ್ಷಗಳ ಸ್ನೇಹದಿಂದ ಈ ಸಿನಿಮಾ ಆಗುತ್ತಿದೆ. ಹರಿ ಇನ್ನೂ ಹಲವಾರು ಸಿನಿಮಾ ಮಾಡುವಂತಾಗಲಿ. ಶರತ್ ಅವರು ಈ ಕಥೆ ಹೇಳಿದಾಗ ನೀನೇ ಮಾಡಬೇಕು ಅಂತ ಹೇಳಿದರು. ಈ ಒಳ್ಳೆಯ ಕತೆಯನ್ನು ಬೇರೆ ನಟರಿಗೆ ಹೇಳೋಣ ಅಂತ ನಾನು ಸಲಹೆ ನೀಡಿದೆ. ಆದರೆ ನೀನೇ ಮಾಡಬೇಕು ಅಂತ ಅವರು ಹೇಳಿದರು. ಅದಕ್ಕಾಗಿ ಧನ್ಯವಾದಗಳು. ನಮ್ಮ ಸ್ನೇಹ ಈ ಸಿನಿಮಾದಿಂದ ಮತ್ತಷ್ಟು ಗಟ್ಟಿ ಆಯಿತು. ಸ್ನೇಹಿತರೆಲ್ಲ ಸೇರಿ ಈ ಸಿನಿಮಾ ಮಾಡಿದ್ದೇವೆ’ ಎಂದು ಶಿವರಾಜ್ ಕೆ.ಆರ್. ಪೇಟೆ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
