ವಿನಯ್ ರಾಜ್ಕುಮಾರ್ ನಟನೆಯ ‘ಗ್ರಾಮಾಯಣ’ ಸೆಟ್ಗೆ ಭೇಟಿ ನೀಡಿದ ಶಿವಣ್ಣ-ಗೀತಕ್ಕ
ವಿನಯ್ ರಾಜ್ಕುಮಾರ್ ಅವರು ‘ಗ್ರಾಮಾಯಣ’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಸೆಟ್ಗೆ ಶಿವರಾಜ್ಕುಮಾರ್ ಹಾಗೂ ಗೀತಕ್ಕ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿನಯ್ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟ ನಿರೀಕ್ಷೆ ಇದೆ.
ವಿನಯ್ ರಾಜ್ಕುಮಾರ್ ಅವರು ಇತ್ತೀಚೆಗೆ ‘ಒಂದು ಸರಳ ಪ್ರೇಮಕಥೆ’ ಚಿತ್ರದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಸಿನಿಮಾ ಬಳಿಕ ವಿನಯ್ ಸುಮ್ಮನೆ ಕೂತಿಲ್ಲ. ಅವರು ‘ಗ್ರಾಮಾಯಣ’ (Gramayana Movie) ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಸೆಟ್ಗೆ ಶಿವರಾಜ್ಕುಮಾರ್ ಹಾಗೂ ಗೀತಕ್ಕ ಭೇಟಿ ನೀಡಿದ್ದಾರೆ. ಈ ಸಂದರ್ಭದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಗ್ರಾಮಾಯಣ’ ಚಿತ್ರಕ್ಕೆ ನಾಲ್ಕು ವರ್ಷದ ಹಿಂದೆಯೇ ಮುಹೂರ್ತ ನಡೆದಿತ್ತು. ಕೊವಿಡ್ಗೂ ಮೊದಲು ಶೂಟಿಂಗ್ ಕೂಡ ನಡೆದಿತ್ತು. ಆದರೆ, ಹಲವು ಕಾರಣಗಳಿಂದ ಸಿನಿಮಾ ಅರ್ಧಕ್ಕೆ ನಿಂತಿತ್ತು. ಈಗ ಮತ್ತೆ ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರತಂಡ ಭರ್ಜರಿಯಾಗಿ ಶೂಟಿಂಗ್ನಲ್ಲಿ ಭಾಗಿ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 08, 2024 08:16 AM