Shivarajkumar: ಶಿವಣ್ಣನ ಐಷಾರಾಮಿ ಕಾರಿನ ಸುತ್ತ ಅಭಿಮಾನಿಗಳ ದಂಡು; ನೂಕುನಗ್ಗುಲಿನಲ್ಲೂ ಸೆಲ್ಫಿ ನೀಡಿ ಮುಂದೆ ಸಾಗಿದ ನಟ
ಶಿವರಾಜ್ಕುಮಾರ್ ಬಗ್ಗೆ ಅಭಿಮಾನಿಗಳಿಗೆ ಸಖತ್ ಕ್ರೇಜ್. ಅವರ ಎನರ್ಜಿ ಕಂಡು ವಾವ್ ಎನ್ನದವರಿಲ್ಲ. ಅದಕ್ಕೆ ಲೇಟೆಸ್ಟ್ ಉದಾಹರಣೆಯಂತಿದೆ ಈ ವಿಡಿಯೋ.
‘ಸೆಂಚುರಿ ಸ್ಟಾರ್’ ಶಿವರಾಜ್ಕುಮಾರ್ (Shivarajkumar) ಅವರು ಸದಾ ಆ್ಯಕ್ಟೀವ್ ಆಗಿರುತ್ತಾರೆ. ವಯಸ್ಸು 60 ದಾಟಿದ್ದರೂ ಅವರು ಹದಿಹರೆಯದ ಯುವಕನಂತೆ ಉತ್ಸಾಹದಿಂದ ಇರುತ್ತಾರೆ. ಅವರು ಎಲ್ಲೇ ಕಾಣಿಸಿದರೂ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬೀಳುತ್ತಾರೆ. ಇಂದು (ಮೇ 8) ಅವರು ಬೆಂಗಳೂರಿನಲ್ಲಿ ತಮ್ಮ ಐಷಾರಾಮಿ ಕಾರಿನಲ್ಲಿ ತೆರಳುವಾಗ ಅಭಿಮಾನಿಗಳು (Shivarajkumar Fans) ಮತ್ತಿಕೊಂಡರು. ಭಾರಿ ನೂಕುನುಗ್ಗುಲಿನಲ್ಲೂ ಕೆಲವರು ಸೆಲ್ಫಿಗಾಗಿ ಹರಸಾಹಸಪಟ್ಟರು. ಆ ಜನಜಂಗುಳಿಯಲ್ಲೂ ಅಭಿಮಾನಿಗಳ ಜೊತೆ ಶಿವಣ್ಣ ಸೆಲ್ಫಿಗೆ ಪೋಸ್ ನೀಡಿ ಮುಂದೆ ಸಾಗಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos