Siddaramaiah’s elation: ಐದು ಗ್ಯಾರಂಟಿಗಳ ಅನುಷ್ಠಾನವನ್ನು ಘೋಷಿಸಿ ಆಚೆ ಬಂದ ಸಿದ್ದರಾಮಯ್ಯ ಮುಖದಲ್ಲಿ ಯುದ್ಧ ಗೆದ್ದ ಯೋಧನ ನಗೆ!

ಅರುಣ್​ ಕುಮಾರ್​ ಬೆಳ್ಳಿ

Updated on: Jun 02, 2023 | 5:24 PM

ಕಾರು ಹತ್ತಿದ ಬಳಿಕ ಅವರು ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.

ಬೆಂಗಳೂರು: ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ್ದ 5 ಗ್ಯಾರಂಟಿಗಳ (5 guarantees) ಅನುಷ್ಠಾನವನ್ನು ಘೋಷಿಸಿದ ಬಳಿಕ ವಿಧಾನ ಸೌಧದಿಂದ ಹೊರಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮುಖದಲ್ಲಿ ಯುದ್ಧ ಗೆದ್ದ ಯೋಧನ ನಗೆ! ಕಳೆದ ಎರಡು ವಾರಗಳಿಂದ ಅವರು ಮುಖಗಂಟಿಕ್ಕಿಕೊಂಡಿದ್ದರು. ಮಾಧ್ಯಮದ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸಿಡುಕುತ್ತಾ ಉತ್ತರಿಸುತ್ತಿದ್ದರು. ಆದರೆ ಇಂದು ಸುದೀರ್ಘ ಸಂಪುಟ ಸಭೆಯ (cabinet meeting) ನಂತರ ಸುದ್ದಿಗೋಷ್ಠಿ ನಡೆಸಿ ವಿಧಾನಸೌಧದಿಂದ ಹೊರಬಂದಾಗ ಅವರ ಮುಖದಲ್ಲಿ ಮಂದಹಾಸ, ನಡಿಗೆಯಲ್ಲಿ ಆಡಿದ್ದನ್ನು ಮಾಡಿ ತೋರಿಸಿದ ಗತ್ತು! ಕಾರು ಹತ್ತಿದ ಬಳಿಕ ಅವರು ಚುನಾವಣಾ ಪ್ರಚಾರದಲ್ಲಿ ಮಾಡುತ್ತಿದ್ದ ಹಾಗೆ, ಕಾರಿನ ಫುಟ್ ಬೋರ್ಡ್ ಮೇಲೆ ನಿಂತು ನೆರೆದಿದ್ದ ಜನ ಮತ್ತು ಮಾಧ್ಯಮಗಳ ಕಡೆ ಕೈ ಬೀಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.