ತನ್ನನ್ನು ಮುಗಿಸುವಂತೆ ಡಾ ಸಿ ಎನ್ ಅಶ್ವಥ್ ನಾರಾಯಣಗೆ ಸದನದಲ್ಲಿ ಸವಾಲೆಸೆದ ಸಿದ್ದರಾಮಯ್ಯ!

|

Updated on: Feb 21, 2023 | 5:17 PM

ಮುಂದುವರಿದು ಮಾತಾಡಿದ ಸಿದ್ದರಾಮಯ್ಯ ಅಂಥ ಬೆದರಿಕೆಗಳಿಗೆಲ್ಲ ತಾನು ಬಗ್ಗುವವನಲ್ಲ ಮತ್ತು ತನ್ನ ನಿಲುವಿನಲ್ಲೂ ಯಾವುದೇ ಬದಲಾವಣೆಯಾಗದು ಎಂದು ಹೇಳಿದರು.

ಬೆಂಗಳೂರು: ಟಿಪ್ಪು ಸುಲ್ತಾನ್ ಅನ್ನು (Tipu Sultan) ಮುಗಿಸಿದ ಹಾಗೆ ಸಿದ್ದರಾಮಯ್ಯನವರನ್ನೂ (Siddaramaiah) ಮುಗಿಸಿಬಿಡೋಣ ಅಂತ ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಹೇಳಿದ್ದಕ್ಕೆ ಸಚಿವರು ಸದನದಲ್ಲಿ ಕ್ಷಮೆ ಕೇಳಿದರೂ ವಿರೋಧ ಪಕ್ಷದ ನಾಯಕ ಇನ್ನೂ ಕ್ಷಮಿಸಿಲ್ಲ. ಇಂದ ಸದನದಲ್ಲಿ ಹಲವಾರು ವಿಷಯಗಳ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ಆ ವಿಷಯವನ್ನು ಪ್ರಸ್ತಾಪಿಸಿ ಆಶ್ವಥ್ ನಾರಾಯಣಗೆ ದಮ್ಮಿದ್ರೆ, ತಾಕತ್ತಿದ್ದರೆ ತಮ್ಮನ್ನು ಮುಗಿಸುವಂತೆ ಸವಾಲೆಲಸೆದರು. ಮುಂದುವರಿದು ಮಾತಾಡಿದ ಅವರು ಅಂಥ ಬೆದರಿಕೆಗಳಿಗೆಲ್ಲ ತಾನು ಬಗ್ಗುವವನಲ್ಲ ಮತ್ತು ತನ್ನ ನಿಲುವಿನಲ್ಲೂ ಯಾವುದೇ ಬದಲಾವಣೆಯಾಗದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ