Who would be CM? ದೆಹಲಿ ತಲುಪಿದ ಬಳಿಕ ಸಿದ್ದರಾಮಯ್ಯ ಸಿಡಿಮಿಡಿತನ ಪ್ರದರ್ಶಿಸಿದ್ದು ಹತಾಷೆಯಿಂದಾಗಿಯೇ?

ಅರುಣ್​ ಕುಮಾರ್​ ಬೆಳ್ಳಿ

Updated on: May 15, 2023 | 6:47 PM

ಸಿಎಂ ಹುದ್ದೆ ಕೈತಪ್ಪುವ ಲಕ್ಷಣ ಸಿದ್ದರಾಮಯ್ಯಗೆ ಕಾಣಿಸಿದೆಯೇ? ಇಲ್ಲಿ ಬೆಂಗಳೂರಲ್ಲಿ ಶಿವಕುಮಾರ್ ಕೂಡ ಸಿಡಿಮಿಡಿತನ ಪ್ರದರ್ಶಿಸುತ್ತಿದ್ದಾರೆ.

ದೆಹಲಿ: ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯರನ್ನು (Siddaramaiah) ದೆಹಲಿಗೆ ಕರೆಸಿದ್ದು ನಿಮಗೆ ಗೊತ್ತಿದೆ. ಡಿಕೆ ಶಿವಕುಮಾರ್ (DK Shivakumar) ಅವರನ್ನು ಸಹ ಕರೆಸಿದೆ ಅದರೆ ಪ್ರಾಯಶಃ ರಾತ್ರಿ ಫ್ಲೈಟ್ ಹತ್ತಬಹುದು. ದೆಹಲಿಗೆ ಹೊರಡುವಾಗಲೇ ಸಿದ್ದರಾಮಯ್ಯ ಸ್ವಲ್ಪ ಅನ್ಯಮನಸ್ಕರಂತೆ ಕಂಡರು. ಆದರೆ ದೆಹಲಿ ತಲುಪಿದಾಗ ಅದು ಸಿಡಿಮಿಡಿಯಾಗಿ ಪರಿವರ್ತನೆಯಾಗಿತ್ತು. ಅವರು ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮ ಪ್ರತಿನಿಧಿಗಳು (media persons) ಅವರನ್ನು ಸುತ್ತುವರಿದರು. ಆದರೆ ಸಿದ್ದರಾಮಯ್ಯ ಯಾರೊಂದಿಗೂ ಮಾತಾಡಲಿಲ್ಲ. ಮಾಧ್ಯಮದವರು ಪ್ರಶ್ನೆ ಕೇಳುತ್ತಿದ್ದರೂ, ಯಾರೋ ಒಬ್ಬರಿಗೆ ವ್ಹೇರ್ ಈಸ್ ದಿ ಕಾರ್ ಅಂತ ಕೇಳಿ ರೀ ದಾರಿ ಬಿಡ್ರೀ ಅನ್ನುತ್ತಾ, ಕೋಪದಿಂದಲೇ ಕಾರು ಹತ್ತಿದರು. ಸಿಎಂ ಹುದ್ದೆ ಕೈತಪ್ಪುವ ಲಕ್ಷಣ ಅವರಿಗೆ ಕಾಣಿಸಿದೆಯೇ? ಇರಬಹುದು. ಅದರೆ ಇಲ್ಲಿ ಬೆಂಗಳೂರಲ್ಲಿ ಶಿವಕುಮಾರ್ ಕೂಡ ಸಿಡಿಮಿಡಿತನ ಪ್ರದರ್ಶಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.