ಬಾಗಲಕೋಟೆ: ಹುನಗುಂದದಲ್ಲಿ ಸಕ್ಕರೆ ಕಾರ್ಖಾನೆಗೆ ಗುದ್ದಲಿ ಪೂಜೆ ನೆರವೇರಿಸಿದ ಸಿದ್ದರಾಮಯ್ಯಗೆ ಬೆಳ್ಳಿಗದೆಯಿಂದ ಸನ್ಮಾನ!
ತಲೆಗೆ ಹಳದಿ ಬಣ್ಣದ ಪೇಟ ಧರಿಸಿ ಹೆಗಲ ಮೇಲೆ ಶಾಲು ಮತ್ತು ಕಂಬಳಿ ಹೊದ್ದ ಸಿದ್ದರಾಮಯ್ಯ ಗದೆಯನ್ನು ಕೈಯಲ್ಲಿ ಹಿಡಿದು ಮೇಲೆತ್ತಿದಾಗ ಅಭಿಮಾನಿಗಳು ಶಿಳ್ಳೆ ಹಾಕುತ್ತಾ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು.
ಬಾಗಲಕೋಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅಧಿಕಾರದಲ್ಲಿರಲಿ ಇಲ್ಲದಿರಲಿ ಕ್ರೌಡ್ ಪುಲ್ಲರ್ ಅನ್ನೋದು ನಿರ್ವಿವಾದಿತ. ಬುಧವಾರ ಅವರು ಬಾಗಲಕೋಟೆ ಹುನಗುಂದ ತಾಲ್ಲೂಕಿನಲ್ಲಿರುವ ಬೆಳಗಲ್ ನಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಒಡೆತನದ ಎಸ್ ಆರ್ ಕೆ ಸಕ್ಕರೆ ಕಾರ್ಖಾನೆಗೆ (sugar factory) ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಿಗೆ ಬೆಳ್ಳಿಗದೆ ನೀಡಿ ಸನ್ಮಾನಿಸಲಾಯಿತು. ತಲೆಗೆ ಹಳದಿ ಬಣ್ಣದ ಪೇಟ ಧರಿಸಿ ಹೆಗಲ ಮೇಲೆ ಶಾಲು ಮತ್ತು ಕಂಬಳಿ ಹೊದ್ದ ಸಿದ್ದರಾಮಯ್ಯ ಗದೆಯನ್ನು ಕೈಯಲ್ಲಿ ಹಿಡಿದು ಮೇಲೆತ್ತಿದಾಗ ಅಭಿಮಾನಿಗಳು ಶಿಳ್ಳೆ ಹಾಕುತ್ತಾ ಚಪ್ಪಾಳೆ ತಟ್ಟಿದ್ದೇ ತಟ್ಟಿದ್ದು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ