Bagalkot | ಬಾದಾಮಿ ಕ್ಷೇತ್ರದ ಮತದಾರನಿಗೆ ಸಿದ್ದರಾಮಯ್ಯ ದ್ರೋಹ ಬಗೆಯುತ್ತಿದ್ದಾರೆ: ಕೆ ಎಸ್ ಈಶ್ವರಪ್ಪ
ಸಿದ್ದರಾಮಯ್ಯಗೆ ಸೋಲುವ ಭೀತಿ ಕಾಡುತ್ತಿದೆ, ಎರಡು ಕ್ಷೇತ್ರಗಳಲ್ಲ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಎಲ್ಲ ಕಡೆ ಸೋಲುವುದು ಖಚಿತ ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತೊಮ್ಮೆ ಕ್ಷೇತ್ರ ಬದಲಾಯಿಸುವ ಮೂಲಕ ಬಾದಾಮಿ (Badami) ಮತದಾರರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶನಿವಾರ ಬಾಗಲಕೋಟೆಯಲ್ಲಿ (Bagalkot) ಹೇಳಿದರು. ಇಲ್ಲಿ ಸುದ್ದ್ದಿಗಾರರೊಂದಿಗೆ ಮಾತಾಡಿದ ಈಶ್ವರಪ್ಪ, ಬಾದಾಮಿ ದೂರವಾಗುವ ಕಾರಣಕ್ಕೆ ಕೋಲಾರದಿಂದ ಸ್ಪರ್ಧಿಸುತ್ತಿರುವುದಾಗಿ ಸಿದ್ದರಾಮಯ್ಯ ಹೇಳುತ್ತಾರೆ, ಹಾಗಾದರೆ ಅವರು 6 ಬಾರಿ ಆಯ್ಕೆಯಾಗಿರುವ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಕಾಲೆಳೆದರು. ಅವರಿಗೆ ಸೋಲುವ ಭೀತಿ ಕಾಡುತ್ತಿದೆ, ಎರಡು ಕ್ಷೇತ್ರಗಳಲ್ಲ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಅವರು ಎಲ್ಲ ಕಡೆ ಸೋಲುವುದು ಖಚಿತ ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ