ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದ ಅನ್ನದಾತ ಸಿದ್ದರಾಮಯ್ಯರನ್ನು ಕೊಲ್ಲಬೇಕೆಂದು ಹೇಳುವ ಸಚಿವನನ್ನು ಕ್ಷಮಿಸಬೇಕಾ? ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಗಳು ಮತ್ತು ಅನ್ನದಾತರು, ಅಂಥ ನಾಯಕನನ್ನು ಅದ್ಯಾವ್ನೋ ಮಿನಿಸ್ಟ್ರು ಕೊಲೆ ಮಾಡಬೇಕು ಅಂತ ಹೇಳುತ್ತಾನೆ, ಅಂಥವನನ್ನು ಕ್ಷಮಿಸಬೇಕಾ? ಎಂದು ಶಿವಕುಮಾರ್ ಹೇಳಿದರು.
ಚಾಮರಾಜನಗರ: ಉನ್ನತ ಶಿಕ್ಷಣ ಖಾತೆ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಆವೇಶದಲ್ಲಿ ಸಿದ್ದರಾಮಯ್ಯರನ್ನು (Siddaramaiah) ಮುಗಿಸಿಬಿಡೋಣ ಅಂತ ಹೇಳಿದ್ದು ಬಿಜೆಪಿಗೆ ದುಬಾರಿಯಾಗುತ್ತಿದೆ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಕೈಗೆ ಒಂದು ದೊಡ್ಡ ಆಯಧ ಸಿಕ್ಕಂತಾಗಿರುವುದು ಸುಳ್ಳಲ್ಲ. ಇಂದು ಚಾಮರಾಜನಗರದ ಹನೂರಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಏಕವಚನದಲ್ಲೇ ಸಚಿವರ ವಿರುದ್ಧ ಹರಿಹಾಯ್ದ್ದರು. ಸಿದ್ದರಾಮಯ್ಯ ನಮ್ಮ ನಾಯಕರು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಅನ್ನದಾತರು, ಅಂಥ ನಾಯಕನನ್ನು ಅದ್ಯಾವ್ನೋ ಮಿನಿಸ್ಟ್ರು ಕೊಲೆ ಮಾಡಬೇಕು ಅಂತ ಹೇಳುತ್ತಾನೆ, ಅಂಥವನನ್ನು ಕ್ಷಮಿಸಬೇಕಾ? ನಾವು ನೀವೆಲ್ಲ ಸೇರಿ ಅವನಿಗೆ ಪಾಠ ಕಲಿಸಬೇಕಿದೆ, ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 21, 2023 06:34 PM