ಜುಬ್ಬಾದ ಮೇಲೆ ಕಾಫಿ ಚೆಲ್ಲಿಕೊಂಡ ಸಿದ್ದರಾಮಯ್ಯ: ಕಲೆ ತೊಳೆಯಲು ಮಹಿಳೆಯರ ಸಹಾಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಭಟನೆಯಲ್ಲಿ ಜುಬ್ಬಾದ ಮೇಲೆ ಕಾಫಿ ಚೆಲ್ಲಿಕೊಂಡಿದ್ದಾರೆ. ಜುಬ್ಬಾದ ಉಂಟಾದ ಕಾಫಿ ಕಲೆಯನ್ನು ತೊಳೆಯಲು ಮಹಿಳಾ ಕಾರ್ಯಕರ್ತೆಯರು ಸಹಾಯ ಮಾಡಿದ್ದಾರೆ.
ಮೈಸೂರು: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮೀಸಲಾತಿ ದುರ್ಬಳಕೆ ಆರೋಪ ಹಿನ್ನೆಲೆ ಸಂವಿಧಾನ ಬಚಾವೋ, ದೇಶ್ ಬಚಾವೋ ಹೆಸರಲ್ಲಿ ಮೈಸೂರಿನ ಪುರಭವನದ ಮುಂಭಾಗ ಕಾಂಗ್ರೆಸ್ ನಾಯಕರಿಂದ ಧರಣಿ ಮಾಡಲಾಗುತ್ತಿದೆ. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರತಿಭಟನೆಯಲ್ಲಿ ಜುಬ್ಬಾದ ಮೇಲೆ ಕಾಫಿ ಚೆಲ್ಲಿಕೊಂಡಿದ್ದಾರೆ. ಜುಬ್ಬಾದ ಉಂಟಾದ ಕಾಫಿ ಕಲೆಯನ್ನು ತೊಳೆಯಲು ಮಹಿಳಾ ಕಾರ್ಯಕರ್ತೆಯರು ಸಹಾಯ ಮಾಡಿದ್ದಾರೆ. ಧರಣಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಉಪಸ್ಥಿತರಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Apr 02, 2023 05:05 PM