ಸಿದ್ದರಾಮಯ್ಯ ಒಬ್ಬ ಜನನಾಯಕ; ಅವರ ಬಗ್ಗೆ ಬಿಕೆ ಹರಿಪ್ರಸಾದ್ ತಪ್ಪು ಸಂದೇಶ ನೀಡುತ್ತಿದ್ದಾರೆ: ಈಶ್ವರಾನಂದ ಶ್ರೀ
ಸಿದ್ದರಾಮಯ್ಯ ಯಾವತ್ತೂ ರಾಜಕಾರಣ ಮಾಡಿದವರಲ್ಲ, ಹಾಗೆ ಮಾಡಿದ್ದೇಯಾದರೆ, ಕುರುಬ ಸಮುದಾಯದವರು ಅವರ ಸಂಪುಟದಲ್ಲಿರುತ್ತಿದ್ದರು. ಸಿದ್ದರಾಮಯ್ಯ ಬಡವರ, ದಲಿತರ, ಹಿಂದುಳಿದವರ ಮತ್ತು ಮಹಿಳೆಯರ ಪರ ಧ್ವನಿಯೆತ್ತಿರುವ ಜನನಾಯಕ ಎಂದು ಶ್ರೀಗಳು ಹೇಳಿದರು. ಸಿದ್ದರಾಮಯ್ಯ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ ಎಂದು ಶ್ರೀಗಳು ಹೇಳಿದರು,
ಚಿತ್ರದುರ್ಗ: ಇದನ್ನು ನಿರೀಕ್ಷಿಸಲಾಗಿತ್ತು. ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಬಿಕೆ ಹರಿಪ್ರಸಾದ್ (BK Hariprasad) ತಮ್ಮನ್ನು ಮಂತ್ರಿ ಮಾಡದ ಅಸಮಾಧಾನ, ಕೋಪ-ತಾಪ, ಬೇಗುದಿಯನ್ನು ಸಾರ್ವಜನಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಉಗ್ರ ಟೀಕೆಗಳನ್ನು ಮಾಡುತ್ತಾ ಹೊರಹಾಕುತ್ತಿದ್ದಾರೆ. ನಿನ್ನೆ ಎಐಸಿಸಿ ಮಧ್ಯಪ್ರವೇಶಿಸಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡದಂತೆ ಹರಿಪ್ರಸಾದ್ ಗೆ ತಾಕೀತು ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಪ್ರಸಾದ್ ಟೀಕೆಗಳನ್ನು ಖಂಡಿಸಿದ್ದಾರೆ. ಕೆಲ್ಲೋಡು ಹತ್ತಿರದ ಕಾಗಿನೆಲೆ ಶಾಖಾಮಠದ ಈಶ್ವರಾನಂದ ಶ್ರೀಗಳು (Eshwaranand Shree) ಇಂದು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ಹರಿಪ್ರಸಾದ್ ಮಾತುಗಳನ್ನು ಖಂಡಿಸಿದ್ದಾರೆ. ಹರಿಪ್ರಸಾದ್ ತಪ್ಪು ಸಂದೇಶವನ್ನು ಜನಕ್ಕೆ ನೀಡುತ್ತಿದ್ದಾರೆ, ಸಿದ್ದರಾಮಯ್ಯ ಯಾವತ್ತೂ ರಾಜಕಾರಣ ಮಾಡಿದವರಲ್ಲ, ಹಾಗೆ ಮಾಡಿದ್ದೇಯಾದರೆ, ಕುರುಬ ಸಮುದಾಯದವರು (Kuruba Community) ಅವರ ಸಂಪುಟದಲ್ಲಿರುತ್ತಿದ್ದರು. ಸಿದ್ದರಾಮಯ್ಯ ಬಡವರ, ದಲಿತರ, ಹಿಂದುಳಿದವರ ಮತ್ತು ಮಹಿಳೆಯರ ಪರ ಧ್ವನಿಯೆತ್ತಿರುವ ಜನನಾಯಕ ಎಂದು ಶ್ರೀಗಳು ಹೇಳಿದರು. ಸಿದ್ದರಾಮಯ್ಯ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ, ಹರಿಪ್ರಸಾದ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ