ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ ಬಿಜೆಪಿ ಜೊತೆ ಕುಮಾರಸ್ವಾಮಿ ದೋಸ್ತಿ ಬೆಳೆಸುತ್ತಿದ್ದಾರೆ: ವೆಂಕಟರಮಣಪ್ಪ, ಮಾಜಿ ಶಾಸಕ

ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ ಬಿಜೆಪಿ ಜೊತೆ ಕುಮಾರಸ್ವಾಮಿ ದೋಸ್ತಿ ಬೆಳೆಸುತ್ತಿದ್ದಾರೆ: ವೆಂಕಟರಮಣಪ್ಪ, ಮಾಜಿ ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 12, 2023 | 1:30 PM

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ಕುಮಾರಸ್ವಾಮಿಯ ಮನೆಬಾಗಿಲಿಗೆ ಒಯ್ದುಕೊಟ್ಟು, 5 ವರ್ಷ ಅಧಿಕಾರ ನಡೆಸಿ ಅಂತ ಹೇಳಿತ್ತು. ಆದರೆ, ಅವರು ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿ ಅಧಿಕಾರ ನಡೆಸಿದರು.ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ಕುಮಾರಸ್ವಾಮಿಯ ಮನೆಬಾಗಿಲಿಗೆ ಒಯ್ದುಕೊಟ್ಟು, 5 ವರ್ಷ ಅಧಿಕಾರ ನಡೆಸಿ ಅಂತ ಹೇಳಿತ್ತು.

ತುಮಕೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಶಾಸಕ ವೆಂಕಟರಮಣಪ್ಪ (Venkataramanappa) ನೇರ ಮಾತುಗಾರಿಕೆಗೆ ಹೆಸರಾದವರು. ಪಾವಗಡದಲ್ಲಿಂದು ಸಾರ್ವಜನಿಕ ಸಭೆಯೊಂದರಲ್ಲಿ ಮಾತಾಡಿದ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗುತ್ತಿರುವ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಇರಾದೆಯನ್ನು ಕಟುವಾಗಿ ಟೀಕಿಸಿದರು. ಈ ಬಾರಿಯ ಚುನಾವಣೆಯಲ್ಲಿ (Assembly polls) 120ಕ್ಕಿಂತ ಹೆಚ್ಚು ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೇವೆ ಅಂತ ಹೇಳುತ್ತಿದ್ದ ಕುಮಾರಸ್ವಾಮಿಗೆ ಕೇವಲ 19 ಸ್ಥಾನ ಮಾತ್ರ ಗೆಲ್ಲುವುದು ಸಾಧ್ಯವಾಯಿತು. 2018ರಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ಕುಮಾರಸ್ವಾಮಿಯ ಮನೆಬಾಗಿಲಿಗೆ ಒಯ್ದುಕೊಟ್ಟು, 5 ವರ್ಷ ಅಧಿಕಾರ ನಡೆಸಿ ಅಂತ ಹೇಳಿತ್ತು. ಆದರೆ, ಅವರು ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿ ಅಧಿಕಾರ ನಡೆಸಿದರು. ಆಮೇಲೆ ಅವರು ಅಮೆರಿಕ ಹೋದಾಗ ಇಲ್ಲಿ ಕುರಿ ವ್ಯಾಪಾರ ನಡೆದು ಕೇವಲ 14 ತಿಂಗಳಲ್ಲಿ ಸರ್ಕಾರ ಬಿದ್ಹೋಯ್ತು ಎಂದು ವೆಂಕಟರಣಪ್ಪ ಹೇಳಿದರು. ಅಂಥ ಬಿಜೆಪಿ ಜೊತೆ ಕುಮಾರಸ್ವಾಮಿ ಲೋಕಸಭಾ ಚುನಾವಣೆಗಾಗಿ ಗೆಳೆತನ ಬೆಳೆಸಿ 4 ಸೀಟುಗಳನ್ನು ಭಿಕ್ಷೆ ಬೇಡುತ್ತಿದ್ದಾರೆ ಎಂದು ಅವರು ಜರಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ