ಸಿದ್ದರಾಮಯ್ಯ ನೇತೃತ್ವದ ಹುಚ್ಚು ಸರ್ಕಾರ ವಿನಾಕಾರಣ ರಾಮ ಭಕ್ತರಿಗೆ ತೊಂದರೆ ಕೊಡುತ್ತಿದೆ: ಕೆಎಸ್ ಈಶ್ವರಪ್ಪ

|

Updated on: Jan 04, 2024 | 7:37 PM

ಮಹ್ಮದ್ ಬಿನ್ ತೊಘಲಕ್ ನಂತೆ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರೆ ತಾವ್ಯಾರೂ ಹೆದರಲ್ಲ ಎಂದು ಈಶ್ವರಪ್ಪ ಹೇಳಿದರು. ಕೇವಲ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ತೊಲಗಬೇಕು ಎಂದು ಹಿರಿಯ ನಾಯಕ ಹೇಳಿದರು.

ಶಿವಮೊಗ್ಗ: ಕರಸೇವಕ ಮತ್ತು ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ (Srikanth Pujari) ಬಂಧನದ ವಿರುದ್ಧ ಇಂದು ನಗರದದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಕಚೇರಿಗೆ ನುಗ್ಗುವ ಪ್ರಯತ್ನದ್ದಲಿದ್ದಾಗ ಬಂಧನಕ್ಕೊಳಕ್ಕಾಗಿ ಬಿಡುಗಡೆಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ರಾಮಮಂದಿರ ಪ್ರಾಣ ಪ್ರತಿಷ್ಠೆ ನಡೆಯುವ ದಿನ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವೇ ಸಂಭ್ರಮಿಸುತ್ತಿರುವಾಗ ಸಿದ್ದರಾಮಯ್ಯನವರ (Siddaramaiah) ಹುಚ್ಚು ಸರ್ಕಾರ 32 ವರ್ಷಗಳ ಹಿಂದಿನ ಪ್ರಕರಣದಲ್ಲಿ ಕರಸೇವಕರನ್ನು ಬಂಧಿಸುತ್ತಿದೆ ಎಂದು ಹೇಳಿದರು. ಬಂಧಿತ ಕರಸೇವಕರನ್ನು ಬಿಡುಗಡೆ ಮಾಡದ ಮತ್ತು ಅವರನ್ನು ಬಂಧಿಸಿದ ಪೊಲೀಸ್ ಇನ್ಸ್ ಪೆಕ್ಟರ್ ನನ್ನು ಸಸ್ಪೆಂಡ್ ಮಾಡದ ಹೊರತು ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಈಶ್ವರಪ್ಪ ಹೇಳಿದರು. ನಂತರ ಬಿಕೆ ಹರಿಪ್ರಸಾದ್ ಅವರನ್ನು ಏಕ ವಚನದಲ್ಲಿ ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ಅವರೊಬ್ಬ ಭಯೋತ್ಪಾದಕ, ರಾಮ ಭಕ್ತರು ಮತ್ತು ರಾಮ ಮಂದಿರದ ಬಗ್ಗೆ ಮಾತಾಡಲು ಯಾವುದೇ ಹಕ್ಕಿಲ್ಲ, ಸರ್ಕಾರ ಅವರನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ