ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್

Updated on: Jan 17, 2026 | 10:22 AM

ಝೈದ್ ಖಾನ್ ಅವರ ‘ಕಲ್ಟ್’ ಸಿನಿಮಾ ಜನವರಿ 23ರಂದು ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮದ ಫ್ಲೆಕ್ಸ್ ವಿವಾದ ಸಾಕಷ್ಟು ಜೋರಾಗಿ ಚರ್ಚೆ ಆಗಿತ್ತು. ಈ ವಿಷಯದಲ್ಲಿ ಝೈದ್ ಖಾನ್ ಮಾತನಾಡಿದ್ದಾರೆ. ಅವರು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಕಲ್ಟ್’ ಸಿನಿಮಾದ ಈವೆಂಟ್ ಇತ್ತೀಚೆಗೆ ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ ನಡೆದಿತ್ತು. ಕೋಟೆ ವೃತ್ತದ ಬಳಿ ದಾರಿಗೆ ಅಡ್ಡಲಾಗಿ ಫ್ಲೆಕ್ಸ್​​ಗಳನ್ನು ಹಾಕಲಾಗಿತ್ತು. ಇದರಿಂದ ಸಂಚಾರಕ್ಕೆ ಅಡ್ಡಿ ಆಗಿತ್ತು. ಆ ಬಳಿಕ ನಗರಸಭೆಗೆ ದೂರು ಬಂದಿದ್ದರಿಂದ ಅದನ್ನು ತೆಗೆದು ಹಾಕಲಾಗಿತ್ತು. ಈ ಸಂಬಂಧ ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ  ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಆ ಪ್ರಕರಣ ದೊಡ್ಡ ಸುದ್ದು ಮಾಡಿತ್ತು. ಈ ಎಲ್ಲಾ ಘಟನೆ ಬಗ್ಗೆ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.

‘ನನ್ನ ಅಭಿಮಾನಿಗಳ ಪರವಾಗಿ ಕ್ಷಮೆ ಕೇಳುತ್ತೇನೆ. ಈ ಘಟನೆ ಬಗ್ಗೆ ನನಗೆ ತಿಳಿದಿರಲಿಲ್ಲ. ಆ ಘಟನೆ ನಡೆಯಬಾರದಿತ್ತು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 17, 2026 10:17 AM