‘ಶೋಧ’ ವೆಬ್ ಸರಣಿಯಲ್ಲಿ ನಟಿಸುವ ಅವಕಾಶ ಪಡೆದ ‘ಸರಿಗಮಪ’ ದಿಯಾ ಹೆಗ್ಡೆ

Updated on: Aug 19, 2025 | 10:44 PM

ಜೀ5 ಒಟಿಟಿಯಲ್ಲಿ ಆಗಸ್ಟ್ 22ರಿಂದ ‘ಶೋಧ’ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ. ಪವನ್ ಕುಮಾರ್, ಸಿರಿ ರವಿಕುಮಾರ್, ಅರುಣ್ ಸಾಗರ್, ಅನುಷಾ ರಂಗನಾಥ್, ದಿಯಾ ಹೆಗ್ಡೆ ಮುಂತಾದವರು ಈ ವೆಬ್ ಸಿರೀಸ್​​ನಲ್ಲಿ ನಟಿಸಿದ್ದಾರೆ. ‘ಜೀ ಕನ್ನಡ’ದ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿದ ದಿಯಾ ಹೆಗ್ಡೆ ಈಗ ಬಾಲ ನಟಿಯಾಗಿ ‘ಶೋಧ’ ವೆಬ್ ಸಿರೀಸ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಜೀ5 ಒಟಿಟಿಯಲ್ಲಿ ಆಗಸ್ಟ್ 22ರಿಂದ ‘ಶೋಧ’ ವೆಬ್ ಸಿರೀಸ್ (Shodha Web Series) ವೀಕ್ಷಣೆಗೆ ಲಭ್ಯವಾಗಲಿದೆ. ಪವನ್ ಕುಮಾರ್, ಸಿರಿ ರವಿಕುಮಾರ್, ಅರುಣ್ ಸಾಗರ್, ಅನುಷಾ ರಂಗನಾಥ್, ದಿಯಾ ಹೆಗ್ಡೆ ಮುಂತಾದವರು ಈ ವೆಬ್ ಸಿರೀಸ್​​ನಲ್ಲಿ ನಟಿಸಿದ್ದಾರೆ. ‘ಜೀ ಕನ್ನಡ’ದ ಸರಿಗಮಪ ರಿಯಾಲಿಟಿ ಶೋನಲ್ಲಿ ಗಾಯಕಿಯಾಗಿ ಮಿಂಚಿದ ದಿಯಾ ಹೆಗ್ಡೆ (Singer Diya Hegde) ಈಗ ಬಾಲ ನಟಿಯಾಗಿ ‘ಶೋಧ’ ವೆಬ್ ಸಿರೀಸ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತಂಡದ ಸದಸ್ಯರು ಮಾತನಾಡಿದರು. ಸೀನಿಯರ್ ಕಲಾವಿದರ ಜೊತೆ ಕೆಲಸ ಮಾಡಿ ಹಲವು ವಿಷಯ ಕಲಿತಿರುವುದಾಗಿ ದಿಯಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More