ಅಸಲಿ ಆಟ ಶುರು ಮಾಡಿದ ಹನುಮಂತ; ಆರ್ಭಟ ನೋಡಿ ಎಲ್ಲರಿಗೂ ಅಚ್ಚರಿ

Updated on: Nov 07, 2024 | 4:58 PM

ಹನುಮಂತ ಈಗ ಮೊದಲಿನಂತಿಲ್ಲ. ವೈಲ್ಡ್ ಕಾರ್ಡ್​ ಮೂಲಕ ಬಿಗ್ ಬಾಸ್ ಮನೆಯೊಳಗೆ ಬಂದ ಅವರು ಆರಂಭದಲ್ಲಿ ಎಲ್ಲದಕ್ಕೂ ಹಿಂಜರಿಯುತ್ತಿದ್ದರು. ಆದರೆ ಈಗ ನಿಧಾನಕ್ಕೆ ಅವರು ಬದಲಾಗಿದ್ದಾರೆ. ಅವರ ಆಟದ ವೈಖರಿ ತುಸು ವೈಲೆಂಟ್ ಆಗುತ್ತಿದೆ. ಹೊಸ ಟಾಸ್ಕ್​ನಲ್ಲಿ ಅವರು ಮುನ್ನುಗ್ಗಿದ ರೀತಿ ಕಂಡು ಎಲ್ಲರಿಗೂ ಅಚ್ಚರಿ ಆಗಿದೆ. ಅದರ ಪ್ರೋಮೋ ಇಲ್ಲಿದೆ..

ಗ್ರಾಮೀಣ ಪ್ರತಿಭೆ ಹನುಮಂತ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ತಮ್ಮ ಬುದ್ಧಿವಂತಿಕೆ ತೋರಿಸುತ್ತಿದ್ದಾರೆ. ಇಷ್ಟು ದಿನ ಏನೂ ಗೊತ್ತಿಲ್ಲದವನ ಹಾಗೆ ಇರುತ್ತಿದ್ದ ಅವರು ಈಗ ಚುರುಕಾಗಿದ್ದಾರೆ. ಟಾಸ್ಕ್ ಆಡುವಾಗ ಹನುಮಂತ ಅವರು ಭಾರಿ ಹುಮ್ಮಸ್ಸಿನಿಂದ ಮುನ್ನುಗ್ಗಿದ್ದಾರೆ. ಅವರ ಆಟವನ್ನು ನೋಡಿ ತ್ರಿವಿಕ್ರಮ್ ಅವರಿಗೂ ಆಶ್ಚರ್ಯ ಆಗಿದೆ. ‘ನಿಜವಾದ ಗೇಮ್​ ಹನುಮಂತನದ್ದು’ ಎಂದು ತ್ರಿವಿಕ್ರಮ್ ಹೇಳಿದ್ದಾರೆ. ‘ನೀ ಭಾರಿ ಅದಿ’ ಎಂದು ಧನರಾಜ್ ಕೂಡ ಹನುಮಂತನ ಬೆನ್ನು ತಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More