ಬರ್ತ್​ಡೇ ಪಾರ್ಟಿಯಲ್ಲಿ ಡ್ರಗ್ಸ್, ಗಾಯಕಿ ಮಂಗ್ಲಿ ಸ್ಪಷ್ಟನೆ

Updated on: Jun 12, 2025 | 10:44 AM

Singer Mangli: ಖ್ಯಾತ ಗಾಯಕಿ ಮಂಗ್ಲಿ ಹೈದರಾಬಾದ್​ನ ಚೆವೆಲ್ಲ ತ್ರಿಪುರಾ ರೆಸಾರ್ಟ್​​ನಲ್ಲಿ ಜೂನ್ 10ರ ರಾತ್ರಿ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಹೈದರಾಬಾದ್ ಪೊಲೀಸರು ದಾಳಿ ನಡೆಸಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಕೆಲವರು ಮಾದಕ ವಸ್ತು ಸೇವಿಸಿದ್ದು ದೃಢವಾಗಿತ್ತು. ಇದೀಗ ಗಾಯಕಿ ಮಂಗ್ಲಿ ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಖ್ಯಾತ ಗಾಯಕಿ ಮಂಗ್ಲಿ (Mangli) ಹೈದರಾಬಾದ್​ನ ಚೆವೆಲ್ಲ ತ್ರಿಪುರಾ ರೆಸಾರ್ಟ್​​ನಲ್ಲಿ ಜೂನ್ 10ರ ರಾತ್ರಿ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಹೈದರಾಬಾದ್ ಪೊಲೀಸರು ದಾಳಿ ನಡೆಸಿದ್ದರು. ಪಾರ್ಟಿಯಲ್ಲಿ ಭಾಗವಹಿಸಿದವರ ರಕ್ತದ ಮಾದರಿಗಳನ್ನು ಪರೀಕ್ಷೆ ನಡೆಸಿದ ಪೊಲೀಸರು ಒಂಬತ್ತು ಮಂದಿ ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದು ದೃಢವಾಗಿದೆ. ನಟಿ ಮಂಗ್ಲಿ ಸೇರಿದಂತೆ ಕೆಲವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದರು. ಇದೀಗ ಗಾಯಕಿ ಮಂಗ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಪಾರ್ಟಿ ವಿಷಯವಾಗಿ, ಡ್ರಗ್ಸ್ ಆರೋಪದ ವಿಷಯವಾಗಿ ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 12, 2025 10:43 AM