ತೆಲುಗಿನ ಖ್ಯಾತ ಗ್ಯಾಯಕಿ ಮಂಗ್ಲಿ ಬರ್ತ್ಡೇ ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ, ಪ್ರಕರಣ ದಾಖಲು
ಮಾದಕ ವಸ್ತು ಮತ್ತು ಅಮಲು ಪದಾರ್ಥಗಳ ನಿಷೇಧ ಕಾಯ್ದೆ ಅಡಿಯಲ್ಲಿ ಮಂಗ್ಲಿ ವಿರುದ್ಧ ಪ್ರಕರಣ ದಾಖಲಾಗಿದೆ. ನಂಬಲರ್ಹ ಮೂಲಗಳ ಪ್ರಕಾರ ಪೊಲೀಸ್ ಅಧಿಕಾರಿಗಳು ಪಾರ್ಟಿಯಲ್ಲಿ ಹಾಜರಿದ್ದ 48 ಜನರ ರಕ್ತ ಪರೀಕ್ಷೆ ನಡೆಸಿದ್ದು 9ಜನ ಗಾಂಜಾ ಸೇವಿಸಿದ್ದು ದೃಢಪಟ್ಟಿದೆ. ಭಾರೀ ಪ್ರತಿಭಾವಂತೆಯಾಗಿರುವ ಮಂಗ್ಲಿ, ಹೆಚ್ಚು ಸಲ ಸಲ್ಲದ ಕಾರಣಗಳಿಂದಾಗಿ ಸುದ್ದಿಯಲ್ಲಿರೋದು ಅವರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಹೈದರಾಬಾದ್, ಜೂನ್ 11: ಮಂಗ್ಲಿ ಗೊತ್ತಲ್ಲ? ಕನ್ನಡದಲ್ಲೂ ಅವರು ಹಾಡಿರೋದು ನಿಜ ಆದರೆ ತೆಲುಗಿನಲ್ಲಿ ಬಹಳ ಜನಪ್ರಿಯ ಗಾಯಕಿ. ನಿನ್ನೆ ಅವರು ಹೈದರಾಬಾದ್ ಹೊರವಲಯದ (on the outskirts of Hyderabad) ಚೆವೆಲ್ಲಾದಲ್ಲಿರುವ ರೆಸಾರ್ಟ್ ಒಂದರಲ್ಲಿ ತಮ್ಮ 31 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಹಿನ್ನೆಲೆಯಲ್ಲಿ ಗಾಯಕಿ ಸುಮಾರು 50 ಜನ ಆಯ್ದ ಅಹ್ವಾನಿತರಿಗೆ ಬರ್ತ್ಡೇ ಬ್ಯಾಶ್ ಏರ್ಪಾಟು ಮಾಡಿದ್ದರು. ಖಚಿತ ಮಾಹಿತಿಯೊಂದನ್ನು ಆಧರಿಸಿ ರೆಸಾರ್ಟ್ ಮೇಲೆ ರೇಡ್ ಮಾಡಿದ ಪೊಲೀಸರಿಗೆ ಪರವಾನಗಿ ಇಲ್ಲದೆ ಸರಬರಾಜು ಆಗುತ್ತಿದ್ದ ವಿದೇಶಿ ವ್ಹಿಸ್ಕಿ ಮತ್ತು ಡ್ರಗ್ಸ್ ಸಿಕ್ಕಿವೆ. ಪೊಲೀಸರು ಪಾರ್ಟಿ ನಡೆಯುತ್ತಿದ್ದ ಸ್ಥಳದ ವಿಡಿಯೋ ರೆಕಾರ್ಡಿಂಗ್ ಮಾಡುತ್ತಾ ಒಳಬಂದಾಗ ಮಂಗ್ಲಿ ವಿಡಿಯೋ ಮಾಡೋದನ್ನು ನಿಲ್ಲಿಸುವಂತೆ ಹೇಳುತ್ತಾರೆ. ಸಾಧ್ಯವಿಲ್ಲ, ನನ್ನ ಕೆಲಸಕ್ಕೆ ನೀವು ಅಡ್ಡಿಪಡಿಸುವಂತಿಲ್ಲ ಎಂದು ಹೇಳುತ್ತಾ ಪೊಲೀಸ್ ಒಳನುಗ್ಗುತ್ತಾರೆ.
ಇದನ್ನೂ ಓದಿ: Mangli: ಅಪಘಾತಕ್ಕೆ ಒಳಗಾಯ್ತು ಖ್ಯಾತ ಗಾಯಕಿ ಮಂಗ್ಲಿ ಕಾರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ

ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
