ಸಿದ್ದರಾಮಯ್ಯ ಸರ್ಕಾರಕ್ಕೆ ಜಾತಿಗಣತಿ ವರದಿ ಬಿಸಿತುಪ್ಪದಂತಾಗಿದೆ: ಬಿ ಶ್ರೀರಾಮುಲು, ಮಾಜಿ ಶಾಸಕ
ಕಾಂತರಾಜ್ ಆಯೋಗ ನೀಡಿದ ಜಾತಿಗಣತಿ ವರದಿಯನ್ನು ಸರ್ಕಾರ ಯಾಕೆ ಅಂಗೀಕರಿಸುತ್ತಿಲ್ಲ? ತಾಂತ್ರಿಕವಾಗಿ ಸರ್ಕಾರಕ್ಕೆ ಅದು ಸಾಧ್ಯವಿಲ್ಲ. ಮರು ಸಮೀಕ್ಷೆ ಮಾಡಿಸುವ ಬಗ್ಗೆ ಸರ್ಕಾರ ಮಾತಾಡುತ್ತಿದೆ. ಹಾಗಾದರೆ ಈ ಸಮೀಕ್ಷೆಗಾಗಿ ಸಿದ್ದರಾಮಯ್ಯ ಸರ್ಕಾರ ಖರ್ಚು ಮಾಡಿದ ₹ 165ಕೋಟಿಯನ್ನು ಯಾರು ಭರಿಸುತ್ತಾರೆ? ಎಷ್ಟು ಖರ್ಚಾಗಿದೆ ಅಂತ ನಾವೇನೂ ಕೇಳಿರಲಿಲ್ಲ, ಸರ್ಕಾರವೇ ಅದನ್ನು ಹೇಳಿತ್ತು ಎಂದು ಶ್ರೀರಾಮುಲು ಹೇಳಿದರು.
ಬೆಂಗಳೂರು ಜೂನ್ 11: ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿ ಶ್ರೀರಾಮಲು, ಜಾತಿಗಣತಿ ವರದಿ (Caste Census report) ರಾಜ್ಯ ಸರ್ಕಾರಕ್ಕೆ ಬಿಸಿತುಪ್ಪದಂತಾಗಿದೆ, ಉಗುಳಲೂ ಆಗಲ್ಲ, ನುಂಗಲೂ ಅಗಲ್ಲ ಎಂದು ಗೇಲಿ ಮಾಡಿದರು. ಜಾತಿಗಣತಿ ಮಾಡಿಸಿದ್ದರ ಬಗ್ಗೆ ಬಿಜೆಪಿಯದೇನೂ ಅಭ್ಯಂತರವಿಲ್ಲ, ಆದರೆ ಇಷ್ಟು ವರ್ಷಗಳ ಕಾಲ ಅದನ್ನ ಬಚ್ಚಿಟ್ಟು ಈಗ ಏಕಾಏಕಿ ಮರುಸಮೀಕ್ಷೆ ಮಾಡಿಸುವ ಹಿಂದಿನ ಉದ್ದೇಶವಾದರೂ ಏನು? ಕಳೆದ ವಾರ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ ಪ್ರಕರಣದಲ್ಲಿ 11ಜನ ಅಮಾಯಕರು ಬಲಿಯಾದ ಬಳಿಕ ಪೊಲೀಸ್ ಜೊತೆ ಸರ್ಕಾರದ ಸಂಘರ್ಷ ನಡೆಯುತ್ತಿದೆ, ಅದನ್ನು ಮುಚ್ಚಿಹಾಕಲು ಪಕ್ಷದ ಹೈಕಮಾಂಡ್ ಜೊತೆ ಸೇರಿ ಆಡುತ್ತಿರುವ ನಾಟಕವಿದು ಎಂದು ಶ್ರೀರಾಮುಲು ಹೇಳಿದರು.
ಇದನ್ನೂ ಓದಿ: ಕಾಲ್ತುಳಿತ: 11 ಜನರ ಸಾವಿನ 1 ದುರಂತದಲ್ಲಿ ಸಿಲುಕಿ ಒದ್ದಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ