Video: ವೇದಿಕೆಯಲ್ಲಿ ಹಾಡುವಾಗ ಎಡವಿ ಬಿದ್ದ ಪೀಲೂ, ತುಮ್​ ಸೇ ಹಿ ಖ್ಯಾತಿಯ ಗಾಯಕ ಮೋಹಿತ್ ಚೌಹಾಣ್

Updated on: Dec 09, 2025 | 7:15 AM

ಸುಪ್ರಸಿದ್ಧ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ವೇದಿಕೆಯಲ್ಲಿ ಹಾಡುವಾಗ ಎಡವಿ ಬಿದ್ದಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಭೋಪಾಲ್​ನ ಏಮ್ಸ್​​ನಲ್ಲಿ ಲೈವ್ ಶೋ ನಡೆಯುತ್ತಿತ್ತು. ಗಾಯಕ ಹಾಡುತ್ತಿರುವ ವೇಳೆ ಎಡವಿ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ರಾಕ್​ ಸ್ಟಾರ್ ಚಿತ್ರದ ನಾದಾನ್ ಪರಿಂದೆ ಹಾಡನ್ನು ಹಾಡುತ್ತಿರುವಾಗ ಘಟನೆ ಸಂಭವಿಸಿದೆ. ಗಾಯಕ ಮೋಹಿತ್ ಚೌಹಾಣ್ ಅವರಿಗೆ ಏನಾದರೂ ಗಾಯಗಳಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೋಹಿತ್ ಚೌಹಾಣ್ ಇದುವರೆಗಿನ ತಮ್ಮ ಗಾಯನ ವೃತ್ತಿಜೀವನದಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ.

ಭೋಪಾಲ್, ಡಿಸೆಂಬರ್ 09: ಸುಪ್ರಸಿದ್ಧ ಬಾಲಿವುಡ್ ಗಾಯಕ ಮೋಹಿತ್ ಚೌಹಾಣ್ ವೇದಿಕೆಯಲ್ಲಿ ಹಾಡುವಾಗ ಎಡವಿ ಬಿದ್ದಿರುವ ಘಟನೆ ಭೋಪಾಲ್​ನಲ್ಲಿ ನಡೆದಿದೆ. ಭೋಪಾಲ್​ನ ಏಮ್ಸ್​​ನಲ್ಲಿ ಲೈವ್ ಶೋ ನಡೆಯುತ್ತಿತ್ತು. ಗಾಯಕ ಹಾಡುತ್ತಿರುವ ವೇಳೆ ಎಡವಿ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ರಾಕ್​ ಸ್ಟಾರ್ ಚಿತ್ರದ ನಾದಾನ್ ಪರಿಂದೆ ಹಾಡನ್ನು ಹಾಡುತ್ತಿರುವಾಗ ಘಟನೆ ಸಂಭವಿಸಿದೆ. ಗಾಯಕ ಮೋಹಿತ್ ಚೌಹಾಣ್ ಅವರಿಗೆ ಏನಾದರೂ ಗಾಯಗಳಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೋಹಿತ್ ಚೌಹಾಣ್ ಇದುವರೆಗಿನ ತಮ್ಮ ಗಾಯನ ವೃತ್ತಿಜೀವನದಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ಪ್ರಸಿದ್ಧ ಹಾಡುಗಳು ಪೀ ಲೂನ್, ತುನೆ ಹೋ ನಾ ಕಹಾ, ಕುನ್ ಫಯಾ ಕುನ್, ತುಮ್ ಸೇ ಹಿ, ರಬ್ಬಾ, ತುಮ್ ಹೋ ಹೀಗೆ ಹಲವು ಉತ್ತಮ ಗೀತೆಗಳನ್ನು ನೀಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ