ಚುನಾವಣೆಯಲ್ಲಿ ಸೋಮಣ್ಣ ನನ್ನ ವಿರುದ್ಧ ಸ್ಫರ್ದಿಸಿದ್ದರೂ ನಮ್ಮ ನಡುವೆ ದ್ವೇಷ, ಅಸೂಯೆಗಳಿಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ
ರಾಜಕಾರಣಿಗಳನ್ನು ಗೆಲ್ಲಿಸುವವರು ಜನ, ಅವರು ಗೆಲ್ಲಿಸಿದರೆ ಅಧಿಕಾರ ಇಲ್ಲದಿದ್ದರೆ ಮನೆ ದಾರಿ ಹಿಡಿಯಬೇಕು,ಆದರೆ ಸೋತಿದ್ದೇವೆ ಅಥವಾ ಸೋಲಿಸಿದ್ದಾರೆ ಅಂತ ಜನಸೇವೆ ಬಿಡಬಾರದು, ನಾಯಕನಾದವನಿಗೆ ಜನಸೇವೆಯಿಂದ ನಿವೃತ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ರಮಣಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah), ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (former CM Basavaraj Bommai) ಮತ್ತು ಮಾಜಿ ಸಚಿವ ವಿ ಸೋಮಣ್ಣ (former minister V Somanna) ವೇದಿಕೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದು ಮತ್ತು ಅವರ ನಡುವೆ ಆತ್ಮೀಯ ಮಾತುಕತೆ ನಡೆದಿದ್ದು ನೋಡುಗರಿಗೆ ಖುಷಿ ನೀಡಿತು. ವಿಧಾನ ಸಭಾ ಚುನಾವಣೆಯಲ್ಲಿ ಸೋಮಣ್ಣ ವರುಣಾ ಕ್ಷೇತ್ರದಿಂದ ತಮ್ಮ ವಿರುದ್ಧ ಸ್ಪರ್ಧಿಸಿದ್ದನ್ನು ಭಾಷಣದಲ್ಲಿ ಉಲ್ಲೇಖಿಸಿದ ಸಿದ್ದರಾಮಯ್ಯ, ಅವರಿಗೆ ತನ್ನ ವಿರುದ್ಧ ಸ್ಪರ್ಧಿಸುವ ಇಚ್ಛೆಯಿರಲಿಲ್ಲ, ಆದರೆ ಅವರ ಹೈಕಮಾಂಡ್ ಸೂಚಿಸಿದ್ದರಿಂದ ಕಣಕ್ಕಿಳಿದಿದ್ದರು. ಹಾಗಂತ, ತಮಗೆ ಸೋಮಣ್ಣ ಮೇಲೆ ದ್ವೇಷ, ಅಸೂಯೆ ಯಾವುದೂ ಇಲ್ಲ ಎಂದ ಸಿದ್ದರಾಮಯ್ಯ ಅವರಿಗೂ ತನ್ನ ಮೇಲೆ ಪ್ರೀತಿ-ವಿಶ್ವಾಸ ಇದೆ ಅಂತ ಹೇಳಿದರು. ರಾಜಕಾರಣಿಗಳನ್ನು ಗೆಲ್ಲಿಸುವವರು ಜನ, ಅವರು ಗೆಲ್ಲಿಸಿದರೆ ಅಧಿಕಾರ ಇಲ್ಲದಿದ್ದರೆ ಮನೆ ದಾರಿ ಹಿಡಿಯಬೇಕು,ಆದರೆ ಸೋತಿದ್ದೇವೆ ಅಥವಾ ಸೋಲಿಸಿದ್ದಾರೆ ಅಂತ ಜನಸೇವೆ ಬಿಡಬಾರದು, ನಾಯಕನಾದವನಿಗೆ ಜನಸೇವೆಯಿಂದ ನಿವೃತ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ