‘ಸಿನಿಮಾ ರಿಲೀಸ್ ಆದ ಕೂಡಲೇ ಕೇಸ್ ಹಾಕಲು ಕೆಲ ಮ್ಯೂಸಿಕ್ ಕಂಪನಿಗಳು ಕಾಯುತ್ತಾ ಇರುತ್ತವೆ’; ರಕ್ಷಿತ್ ಶೆಟ್ಟಿ ಬೇಸರ
ನ್ಯಾಯ ಎಲ್ಲಿದೆ..’ ಹಾಗೂ ‘ಗಾಳಿಮಾತು..’ ಹಾಡುಗಳನ್ನು ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ಯಲ್ಲಿ ಅಕ್ರಮವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ಎಂಆರ್ಟಿ ಮ್ಯೂಸಿಕ್ನವರು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ರಕ್ಷಿತ್ ಶೆಟ್ಟಿ ಅವರು ಈಗ ವಿಚಾರಣೆಗೆ ಹಾಜರಾಗಿದ್ದಾರೆ.
ಎಂಆರ್ಟಿ ಮ್ಯೂಸಿಕ್ ಸಂಸ್ಥೆಯಿಂದ ಒಪ್ಪಿಗೆ ಪಡೆಯದೆ ಹಾಡುಗಳನ್ನು ಬಳಕೆ ಮಾಡಿದ ಆರೋಪದಡಿ ರಕ್ಷಿತ್ ಶೆಟ್ಟಿ ಅವರು ಬೆಂಗಳೂರಿನಲ್ಲಿ ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ತಮ್ಮ ತಪ್ಪು ಇಲ್ಲ ಎಂದಿದ್ದಾರೆ. ‘ಜನವರಿಯಲ್ಲಿ ಬ್ಯಾಚುಲರ್ ಪಾರ್ಟಿ ರಿಲೀಸ್ ಆಗಿತ್ತು. ಹಳೆಯ ಕನ್ನಡ ಹಾಡುಗಳನ್ನು ಬಳಕೆ ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಸರೆಗಮ ಕಂಪನಿಯ ಎರಡು ಹಾಡುಗಳು ಇದ್ದವು. ಅವರ ಒಪ್ಪಿಗೆ ಕೇಳಿದ್ವಿ. ಅವರು ಒಂದು ಮೊತ್ತ ಕೇಳಿದರು. ನಾವು ಅದನ್ನು ನೀಡಿ ಹಾಡು ಬಳಕೆ ಮಾಡಿಕೊಂಡೆವು. ಮತ್ತೆರಡು ಹಾಡುಗಳು ಬಳಕೆ ಕಾಪಿರೈಟ್ ವೈಲೇಷನ್ ಅಲ್ಲ. ಆದರೂ ಇರಲಿ ಅಂತ ಒಪ್ಪಿಗೆ ತೆಗೆದುಕೊಳ್ಳಲು ಹೋದೆವು. ಅವರು ದೊಡ್ಡ ಮೊತ್ತ ಕೇಳಿದರು. ಅದು ಸರಿ ಎನಿಸಲಿಲ್ಲ. ಎರಡು ಹಾಡು ಕೆಲವೇ ಸೆಕೆಂಡ್ ಬರುತ್ತದೆ. ಇದು ಕಾಪಿರೈಟ್ ಅಲ್ಲ. ಈ ರೀತಿಯ ಮೂರ್ನಾಲ್ಕು ಮ್ಯೂಸಿಕ್ ಸಂಸ್ಥೆಗಳು ಇವೆ. ಇವರ ಕೆಲಸವೇ ಇದು. ಸಿನಿಮಾ ರಿಲೀಸ್ ಆದ ತಕ್ಷಣ ಎಲ್ಲೆಲ್ಲಿ ಕೇಸ್ ಹಾಕಬಹುದು ಎಂದು ಕಾಯುತ್ತಾ ಇರುತ್ತಾರೆ’ ಎಂದಿದ್ದಾರೆ ರಕ್ಷಿತ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.