ಕೇರಳ ಗುಡ್ಡ ಕುಸಿತ: ನನ್ನ ಸ್ನೇಹಿತರು ಸೇರಿದಂತೆ 35 ಜನರನ್ನ ಕಳೆದುಕೊಂಡೆ, ದೇವರು ಕಾಪಾಡಲಿಲ್ಲ! ಕನ್ನಡಿಗನ ಅಳಲು

ಕುಸಿತ ಗುಡ್ಡ ಮತ್ತು ಇರುವಝಿಂಜಿ ನದಿ ಪ್ರವಾಹದಿಂದ ಕೇರಳದ ವಯನಾಡು ಬಳಿಯ ಚೂರಲ್​​ಮಲ ಗ್ರಾಮ ಸರ್ವನಾಶವಾಗಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಚೂರಲ್​​ಮಲ ಗ್ರಾಮದಲ್ಲಿ ನೆಲಸಿದ್ದ ಕನ್ನಡಿಗ ರಾಜಕುಮಾರ್ ದುರಂತದ ಭೀಕರತೆ ಬಗ್ಗೆ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ಕೇರಳ ಗುಡ್ಡ ಕುಸಿತ: ನನ್ನ ಸ್ನೇಹಿತರು ಸೇರಿದಂತೆ 35 ಜನರನ್ನ ಕಳೆದುಕೊಂಡೆ, ದೇವರು ಕಾಪಾಡಲಿಲ್ಲ! ಕನ್ನಡಿಗನ ಅಳಲು
|

Updated on: Aug 02, 2024 | 12:34 PM

ಗುಡ್ಡ ಕುಸಿತ ಮತ್ತು ಇರುವಝಿಂಜಿ ನದಿ ಪ್ರವಾಹದಿಂದ  (Wayanad land slide)  ಕೇರಳದ ವಯನಾಡು ಬಳಿಯ ಚೂರಲ್​​ಮಲ ಗ್ರಾಮ ಸರ್ವನಾಶವಾಗಿದೆ. ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯಚರಣೆ ನಡೆಯುತ್ತಿದೆ. ದೇವರನಾಡಿನಲ್ಲಿ ಇದೆಂತ ಭೀಕರ ದುರಂತ ಜನರು ಮಮ್ಮಲ ಮರುಗುತ್ತಿದ್ದಾರೆ. ವಯನಾಡಿನಲ್ಲಿ ಅನೇಕ ಕನ್ನಡಿಗರು ನೆಲಸಿದ್ದಾರೆ. ಈಗವರೆಗೆ ಕರ್ನಾಟಕದ ಆರು ಜನರು ಮೃತಪಟ್ಟಿದ್ದಾರೆ. ಚೂರಲ್​​ಮಲ ಗ್ರಾಮದಲ್ಲಿ ನೆಲಸಿದ್ದ ಕನ್ನಡಿಗ ರಾಜಕುಮಾರ್ ದುರಂತದ ಭೀಕರತೆ ಬಗ್ಗೆ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

“ದುರಂತಕ್ಕೂ ಮುನ್ನ ನಮ್ಮೂರು ಚೆನ್ನಾಗಿತ್ತು. ಇವಾಗ ಭಯಾನಕವಾಗಿದೆ. ನೋಡಲು ಆಗುತ್ತಿಲ್ಲ. ಕೇರಳ ದೇವರನಾಡು, ಆದರೆ ಆ ದೇವರು ಕೂಡ ನಮ್ಮನ್ನು ಕಾಪಾಡಲಿಲ್ಲ ಅಂತ ಬೇಸರ. ನನ್ನ ಜೊತೆಗೆ ಓದಿದವರು, ಸ್ನೇಹಿತರು ಮತ್ತು ಅವರ ಕುಟುಂಬದವರು ಸೇರಿದಂತೆ 36 ಜನರನ್ನು ಕಳೆದುಕೊಂಡಿದ್ದೇನೆ. ಹಿಂದೆ ಇದ್ದ ಊರು ಈಗಿಲ್ಲ, ನಮ್ಮವರು ಇಲ್ಲ. ದೇವಾಲಯ, ಮನೆ ಎಲ್ಲ ಕೊಚ್ಚಿಕೊಂಡು ಹೋಗಿದೆ. 20-30 ಕಿ.ಮೀ ದೂರದಲ್ಲಿ ಮೃತ ದೇಹ ಸಿಗುತ್ತಿದೆ. ಸುಮಾರು 500 ಜನರು ನಾಪತ್ತೆಯಾಗಿದ್ದಾರೆ.

ಭೂಕುಸಿತ ದುರಂತದಲ್ಲಿ ಈವರೆಗೆ 29 ಮಕ್ಕಳು ಸೇರಿದಂತೆ 316 ಜನ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದಯ, ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 1000ಕ್ಕೂ ಅಧಿಕ ಜನರನ್ನು ರಕ್ಷಿಸಲಾಗಿದೆ. 298ಕ್ಕೂ ಅಧಿಕ ಜನರು ನಾಪತ್ತೆಯಾಗಿರುವ ಮಾಹಿತಿ ದೊರೆತಿದೆ. ಎನ್​​ಡಿ​ಆರ್​ಎಫ್​​, ಎಸ್​ಡಿಆರ್​ಎಫ್​, ಅಗ್ನಿಶಾಮಕ ದಳ, ಸೇನಾಪಡೆಗಳಿಂದ ಶೋಧ ಕಾರ್ಯ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

 

Follow us