Loading video

Sudeep: ‘ನನ್ನ-ಸುದೀಪ್ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆಗಿದೆ’; ಸೂರಪ್ಪ ಬಾಬು

|

Updated on: Jul 24, 2023 | 8:47 AM

ಸುದೀಪ್ ವಿರುದ್ಧ ನಿರ್ಮಾಪಕರು ಮಾಡುತ್ತಿರುವ ಆರೋಪದ ಹಿಂದಿರುವ ಮಾಸ್ಟರ್​ ಮೈಂಡ್ ನಿರ್ಮಾಪಕ ಸೂರಪ್ಪ ಬಾಬು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ (Sudeep) ಹೆಸರಿನ ಸುತ್ತ ವಿವಾದ ಹುಟ್ಟಿಕೊಂಡಿದೆ. ನಿರ್ಮಾಪಕ ಎಂಎನ್ ಕುಮಾರ್ ಅವರು ಸುದೀಪ್ ಅವರಿಂದ ಮೋಸ ಆಗಿದೆ ಎನ್ನುವ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿ ಸಂಧಾನ ಸಭೆ ಕೂಡ ನಡೆದಿದೆ. ಈ ಮಧ್ಯೆ ನಿರ್ಮಾಪಕ ರೆಹಮಾನ್ ಕೂಡ ಸುದೀಪ್ ವಿರುದ್ಧ ಕಿಡಿಕಾರಿದ್ದರು. ಇವರ ಹಿಂದಿರುವ ಮಾಸ್ಟರ್​ ಮೈಂಡ್ ನಿರ್ಮಾಪಕ ಸೂರಪ್ಪ ಬಾಬು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹಾಗೂ ಸುದೀಪ್ ಮಧ್ಯೆ ಇರುವ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸ ಆಗಿದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ