ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು; ನಾಚಿ ನೀರಾದ ಸೋನಲ್

Edited By:

Updated on: Dec 19, 2025 | 7:50 AM

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಅವರು ಮದುವೆ ಆಗಿ ವರ್ಷವೇ ಕಳೆದಿದೆ. ಇತ್ತೀಚೆಗೆ ಅವರು ಸುತ್ತಾಟ ನಡೆಸಿ ಹಾಯಾಗಿದ್ದರು. ಈಗ ಸೋನಲ್ ಅವರಿಗೆ ಯೋಗರಾಜ್ ಭಟ್ ಒಂದು ಅಚ್ಚರಿಯ ಪ್ರಶ್ನೆ ಕೇಳಿದ್ದಾರೆ. ಅವರು ತಮ್ಮ ಎರಡನೇ ಚಳಿಗಾಲದ ಅನುಭವ ಹೇಳಿ ಎಂದಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ದಾಂಪತ್ಯಕ್ಕೆ ವರ್ಷವೇ ಕಳೆದಿದೆ. ವಿವಾಹದ ಬಳಿಕ ಅವರಿಗೆ ಸಿಗುತ್ತಿರುವ ಎರಡನೇ ಚಳಿಗಾಲ ಇದಾಗಿದೆ. ‘ಲ್ಯಾಂಡ್ ಲಾರ್ಡ್’ ಸಿನಿಮಾದ ‘ನಿಂಗವ್ವ ನಿಂಗವ್ವ’ ಹಾಡು ರಿಲೀಸ್ ಸಮಾರಂಭಕ್ಕೆ ಅವರು ಅತಿಥಿಯಾಗಿ ಬಂದಿದ್ದರು. ತರುಣ್ ಸುಧೀರ್ ಕೂಡ ಜೊತೆಯಲ್ಲಿ ಇದ್ದರು. ಈ ವೇಳೆ ಎರಡನೇ ಚಳಿಗಾಲ ಅನುಭವವನ್ನು ಯೋಗರಾಜ್ ಭಟ್ ಕೇಳಿದರು ಮತ್ತು ಸೋನಲ್ ಇದಕ್ಕೆ ನಾಚಿ ನೀರಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.