VIDEO: ದಿ ಹಂಡ್ರೆಡ್ನಲ್ಲಿ ಹ್ಯಾಟ್ರಿಕ್ ವಿಕೆಟ್
The Hundred:172 ರನ್ಗಳ ಗುರಿ ಬೆನ್ನತ್ತಿದ ನಾದರ್ನ್ ಸೂಪರ್ ಚಾರ್ಜರ್ಸ್ ತಂಡವು 50 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 63 ರನ್ಗಳು ಮಾತ್ರ. ಅದರಲ್ಲೂ 50ನೇ ಓವರ್ನ ಕೊನೆಯ ಎಸೆತದಲ್ಲಿ ಸೋನಿ ಬೇಕರ್ ಡೇವಿಡ್ ಮಲಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದಾದ ಬಳಿಕ 86ನೇ ಮತ್ತು 87ನೇ ಎಸೆತಗಳಲ್ಲಿ ಟಾಮ್ ಲಾವ್ಸ್ ಹಾಗೂ ಜೇಕಬ್ ಡಫಿ ವಿಕೆಟ್ ಕಬಳಿಸುವ ಮೂಲಕ ಸೋನಿ ಬೇಕರ್ ಹ್ಯಾಟ್ರಿಕ್ ವಿಕೆಟ್ಗಳ ಸಾಧನೆ ಮಾಡಿದರು.
ದಿ ಹಂಡ್ರೆಡ್ ಲೀಗ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೌಲರ್ಗಳ ಪಟ್ಟಿಗೆ ಹೊಸ ಸೇರ್ಪಡೆ ಸೋನಿ ಬೇಕರ್. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಈ ಟೂರ್ನಿಯ 17ನೇ ಪಂದ್ಯದಲ್ಲಿ ಬೇಕರ್ ಮೂರು ಎಸೆತಗಳಲ್ಲಿ ಮೂರು ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಮ್ಯಾಚೆಂಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮ್ಯಾಚೆಂಸ್ಟರ್ ಒರಿಜಿನಲ್ಸ್ ತಂಡವು 100 ಎಸೆತಗಳಲ್ಲಿ 3 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.
172 ರನ್ಗಳ ಗುರಿ ಬೆನ್ನತ್ತಿದ ನಾದರ್ನ್ ಸೂಪರ್ ಚಾರ್ಜರ್ಸ್ ತಂಡವು 50 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 63 ರನ್ಗಳು ಮಾತ್ರ. ಅದರಲ್ಲೂ 50ನೇ ಓವರ್ನ ಕೊನೆಯ ಎಸೆತದಲ್ಲಿ ಸೋನಿ ಬೇಕರ್ ಡೇವಿಡ್ ಮಲಾನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಇದಾದ ಬಳಿಕ 86ನೇ ಮತ್ತು 87ನೇ ಎಸೆತಗಳಲ್ಲಿ ಟಾಮ್ ಲಾವ್ಸ್ ಹಾಗೂ ಜೇಕಬ್ ಡಫಿ ವಿಕೆಟ್ ಕಬಳಿಸುವ ಮೂಲಕ ಸೋನಿ ಬೇಕರ್ ಹ್ಯಾಟ್ರಿಕ್ ವಿಕೆಟ್ಗಳ ಸಾಧನೆ ಮಾಡಿದರು.
ಅಲ್ಲದೆ ಈ ಪಂದ್ಯದಲ್ಲಿ 17 ಎಸೆತಗಳನ್ನು ಎಸೆದ ಸೋನಿ ಬೇಕರ್ ಕೇವಲ 21 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ನಾರ್ದರ್ನ್ ಸೂಪರ್ ಚಾರ್ಜರ್ಸ್ ತಂಡವು 87 ಎಸೆತಗಳಲ್ಲಿ 114 ರನ್ಗಳಿಗೆ ಆಲೌಟ್ ಆಗಿ 57 ರನ್ಗಳಿಂದ ಸೋಲೊಪ್ಪಿಕೊಂಡಿತು.
