‘ದೇಹದ ತೂಕ ಮತ್ತು ಹೃದಯಾಘಾತದ ಬಗ್ಗೆ ಚರ್ಚೆ ಮಾಡೋಕೆ ಆಗಲ್ಲ’: ಸ್ಪಂದನಾ ನಿಧನಕ್ಕೆ ಸೃಜನ್​ ಲೋಕೇಶ್​ ಪ್ರತಿಕ್ರಿಯೆ

Edited By:

Updated on: Aug 08, 2023 | 7:40 PM

Spandana Vijay Raghavendra Heart Attack: ‘ಇಂಥ ಚರ್ಚೆ ಬಗ್ಗೆ ನನಗೆ ಆಕ್ಷೇಪ ಇದೆ. ಆರೋಗ್ಯಕರವಾಗಿ ಇರಬೇಕಾಗಿದ್ದು ಅಗತ್ಯ. ಅದು ಜೀವನ ಶೈಲಿ. ಫಿಟ್ನೆಸ್​ ಇಲ್ಲದಿದ್ದರೆ ನಾವು ಆ್ಯಕ್ಟೀವ್​ ಆಗಿರಲು ಸಾಧ್ಯವಿಲ್ಲ’ ಎಂದಿದ್ದಾರೆ ಸೃಜನ್​ ಲೋಕೇಶ್.

ದೇಹದ ತೂಕ ಮತ್ತು ಹೃದಯಾಘಾತದ (Heart Attack) ನಡುವೆ ಸಂಬಂಧ ಇದೆಯೇ ಎಂಬ ಚರ್ಚೆ ಯಾವಾಗಲೂ ನಡೆಯುವಂಥದ್ದು. ವಿಜಯ್​ ರಾಘವೇಂದ್ರ ಅವರ ಪತ್ನಿ ಸ್ಪಂದನಾ (Spandana Vijay Raghavendra) ನಿಧನದ ಬಳಿಕ ಮತ್ತೆ ಅದೇ ಚರ್ಚೆ ಜೋರಾಗಿದೆ. ಸ್ಪಂದನಾ ಅವರು ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು ಎಂಬ ಅಂತೆ-ಕಂತೆಗಳು ಕೇಳಿಬಂದಿವೆ. ಈ ಬಗ್ಗೆ ನಟ, ನಿರೂಪಕ ಸೃಜನ್​ ಲೋಕೇಶ್ (Srujan Lokesh)​ ಅವರು ಮಾತನಾಡಿದ್ದಾರೆ. ‘ದೇಹದ ತೂಕಕ್ಕೂ ಹೃದಯಾಘಾತಕ್ಕೂ ಸಂಬಂಧ ಇದೆ ಎಂಬ ಚರ್ಚೆ ಬಗ್ಗೆ ನನಗೆ ಆಕ್ಷೇಪ ಇದೆ. ಆರೋಗ್ಯಕರವಾಗಿ ಇರಬೇಕಾಗಿದ್ದು ಅಗತ್ಯ. ಅದು ಜೀವನ ಶೈಲಿ. ಫಿಟ್ನೆಸ್​ ಇಲ್ಲದಿದ್ದರೆ ನಾವು ಆ್ಯಕ್ಟೀವ್​ ಆಗಿರಲು ಸಾಧ್ಯವಿಲ್ಲ. ಅದರಿಂದಲೇ ನಿಧನರಾದರು ಅಂತ ಚರ್ಚೆ ಮಾಡೋಕೆ ಆಗಲ್ಲ. ಅಷ್ಟು ಫಿಟ್​ ಆಗಿದ್ದ ಪುನೀತ್​ ರಾಜ್​ಕುಮಾರ್​ ಅವರಿಗೆ ಯಾಕೆ ಹೀಗಾಯಿತು. ಏನೂ ಮಾಡದೇ ಇರುವವರ 90 ವರ್ಷ ಬದುಕುತ್ತಾರಲ್ಲ ಅದು ಹೇಗೆ? ಈ ವಿಚಾರಗಳ ಬಗ್ಗೆ ಈಗ ಅಂತಿಮ ನಿರ್ಧಾರಕ್ಕೆ ಬರೋದು ಸರಿಯಲ್ಲ ಅಂತ ನನಗೆ ಅನಿಸುತ್ತದೆ’ ಎಂದು ಸೃಜನ್​ ಲೋಕೇಶ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More