ಹನುಮ ಧ್ವಜ ತೆಗೆದು ಸರ್ಕಾರ ಕುತಂತ್ರ ಮಾಡ್ತಿದೆ; ಕಿಡಿಕಾರಿದ ಆರ್​ ಅಶೋಕ

ಮಧ್ಯಾಹ್ನ ರಾಷ್ಟ್ರಧ್ವಜವನ್ನು ಹಾರಿಸಿ ಕಾನೂನು ಗಾಳಿಗೆ ತೂರಿದ್ದಾರೆ. ಆ ಅಧಿಕಾರಿಯನ್ನು ಅಮಾನತುಗೊಳಿಸಲಿ. ಹನುಮ ಧ್ವಜ ತೆರವುಗೊಳಿಸಲೆಂದೇ ರಾಷ್ಟ್ರ ಧ್ವಜ ಹಾರಿಸಿದ್ದು, ಹನುಮ ಧ್ವಜ ತೆರವು ಪ್ರಶ್ನಿಸಿದ್ದಕ್ಕೆ ಲಾಠಿಚಾರ್ಜ್‌ ನಡೆಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ ಎಂದು ಆರ್​ ಅಶೋಕ ಕಿಡಿಕಾರಿದ್ದಾರೆ.

ಹನುಮ ಧ್ವಜ ತೆಗೆದು ಸರ್ಕಾರ ಕುತಂತ್ರ ಮಾಡ್ತಿದೆ; ಕಿಡಿಕಾರಿದ ಆರ್​ ಅಶೋಕ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 28, 2024 | 5:16 PM

ಮಂಡ್ಯ, ಜ.28: ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಪಕ್ಷ ನಾಯಕ ಆರ್​. ಅಶೋಕ(R Ashoka) ‘ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗ್ರಾ.ಪಂಚಾಯತಿ ಅನುಮತಿ ಪಡೆದು ಒಂದು ವಾರದ ಹಿಂದೆಯೇ ಹನುಮ ಧ್ವಜ ಹಾರಿಸಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ನಾಯಕರನ್ನು ಕರೆದಿರಲಿಲ್ಲ. ಹೀಗಾಗಿ ಹನುಮ ಧ್ವಜ ತೆಗೆದು ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅದು ಕೂಡ ಕಾನೂನುಬಾಹಿರವಾಗಿ ರಾಷ್ಟ್ರ ಧ್ವಜ ಹಾರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹನುಮ ಧ್ವಜ ತೆರವುಗೊಳಿಸಲೆಂದೇ ರಾಷ್ಟ್ರ ಧ್ವಜ ಹಾರಿಸಿದ್ದಾರೆ

ಮಧ್ಯಾಹ್ನ ರಾಷ್ಟ್ರಧ್ವಜವನ್ನು ಹಾರಿಸಿ ಕಾನೂನು ಗಾಳಿಗೆ ತೂರಿದ್ದಾರೆ. ಆ ಅಧಿಕಾರಿಯನ್ನು ಅಮಾನತುಗೊಳಿಸಲಿ. ಹನುಮ ಧ್ವಜ ತೆರವುಗೊಳಿಸಲೆಂದೇ ರಾಷ್ಟ್ರ ಧ್ವಜ ಹಾರಿಸಿದ್ದು, ಹನುಮ ಧ್ವಜ ತೆರವು ಪ್ರಶ್ನಿಸಿದ್ದಕ್ಕೆ ಲಾಠಿಚಾರ್ಜ್‌ ನಡೆಸಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಗೂಂಡಾಗಿರಿ. ಸ್ಥಳಕ್ಕೆ ಆಗಮಿಸುತ್ತಿದ್ದ ನನ್ನನ್ನು ಮಾರ್ಗಮಧ್ಯೆ ತಡೆಯಲು ಯತ್ನಿಸಿದರು. ಇವರ ಮನಸ್ಸಿನಲ್ಲಿ ಟಿಪ್ಪುಸುಲ್ತಾನ್‌ ಇದ್ದಾನೆಂದು ಕಿಡಿಕಾರಿದರು. ಹನುಮ ಹುಟ್ಟಿದ ನಾಡಿನಲ್ಲೇ ಹನುಮನಿಗೆ ಅಪಮಾನ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ, ಸರ್ಕಾರ, ಅಧಿಕಾರಿಗಳಿಗೆ ನಾಚಿಕೆ ಆಗಲ್ಲವಾ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us