Assembly Session: ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ವಾಕ್ಸಮರ ಹೆಚ್ಚಿದಾಗ ಸದನವನ್ನು ಮುಂದೂಡಿದ ಸ್ಪೀಕರ್ ಯುಟಿ ಖಾದರ್

|

Updated on: Jul 19, 2023 | 2:25 PM

ಬಿಜೆಪಿ ನಾಯಕರು ವಾದ ಮಾಡುತ್ತಲೇ ಸದನದ ಬಾವಿಗಿಳಿದಾಗ ಸ್ಪೀಕರ್ 10 ನಿಮಿಷಗಳ ಕಾಲ ಸದನವನ್ನು ಮುಂದೂಡುತ್ತಾರೆ.

ಬೆಂಗಳೂರು: ನಿನ್ನೆಯಂತೆ ಇವತ್ತು ಕೂಡ ಸದನದಲ್ಲಿ ಕಡಿಮೆ ಸಂಖ್ಯೆ ಸದಸ್ಯರಿದ್ದರು. ಆದರೆ ಆಡಳಿತ (ruling) ಮತ್ತು ವಿರೋಧ ಪಕ್ಷದ ನಾಯಕರ (opposition leaders) ಮಾತಿನ ಚಕಮಕಿ ನಡೆದು ಸದನ ರಣರಂಗವಾಗಿ ಮಾರ್ಪಟ್ಟಿತು. ವಿಷಯವೊಂದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಆರ್ ಅಶೋಕ, ಸುನೀಲ್ ಕುಮಾರ್, ಪ್ರಭು ಚೌಹಾನ್ ಮತ್ತು ಸುರೇಶ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಲಾರಂಭಿಸಿದಾಗ ಸಚಿವರು- ಕೃಷ್ಣ ಭೈರೇಗೌಡ, ಪ್ರಿಯಾಂಕ್ ಖರ್ಗೆ ಮತ್ತು ಕೆಜೆ ಜಾರ್ಜ್ ತೀವ್ರ ಆಕ್ಷೇಪಣೆ ಸಲ್ಲಿಸುತ್ತಾರೆ. ಯಾವುದೇ ವಿಷಯವನ್ನು ನೋಟೀಸ್ ನೀಡದೆ ಪ್ರಸ್ತಾಪಿಸುವುದು ನಿಯಾಮಾವಳಗಳಲ್ಲಿ ಅವಕಾಶವಿಲ್ಲ ಎಂದು ಸಚಿವರುಗಳು ಹೇಳುತ್ತಾರೆ. ಅದೇ ಮಾತನ್ನು ಪುನರುಚ್ಛರಿಸುವ ಸಭಾಪತಿ ಯುಟಿ ಖಾದರ್ (Speaker UT Khader) ನೋಟೀಸ್ ಕೊಟ್ಟು ಮಾತಾಡಿ ಎಂದು ಬಿಜೆಪಿ ನಾಯಕರಿಗೆ ಸೂಚಿಸುತ್ತಾರೆ. ಅಲ್ಲಿಂದ ಗಲಾಟೆ ಮತ್ತಷ್ಟು ಜೋರು ಹಿಡಿಯುತ್ತದೆ. ಯಾರು ಏನು ಮಾತಾಡುತ್ತಿದ್ದಾರೆ ಅನ್ನೋದು ಗೊತ್ತಾಗದಷ್ಟು ಗದ್ದಲ ಸದನದಲ್ಲಿ ಉಂಟಾಗುತ್ತದೆ. ಬಿಜೆಪಿ ನಾಯಕರು ವಾದ ಮಾಡುತ್ತಲೇ ಸದನದ ಬಾವಿಗಿಳಿದಾಗ ಸ್ಪೀಕರ್ 10 ನಿಮಿಷಗಳ ಕಾಲ ಸದನವನ್ನು ಮುಂದೂಡುತ್ತಾರೆ.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ