Daily Devotional: ಮನೆಗೆ ಕಾಗೆ ಹೊಕ್ಕರೆ ಮನೆಯನ್ನ ತೊರೆಯಬೇಕಾ?

Updated on: Aug 25, 2025 | 7:09 AM

ಕಾಗೆಯನ್ನು ಪಿತ್ರುಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಗೆ ಕಾಗೆ ಬಂದರೆ ತಕ್ಷಣ ಮನೆ ಬಿಡುವ ಅಗತ್ಯವಿಲ್ಲ. ಬ್ರಾಹ್ಮಿ, ಅಭಿಜಿತ್, ಗೋಧೂಳಿ ಮುಹೂರ್ತಗಳಿಗೆ ಪ್ರಾಶಸ್ತ್ಯ ನೀಡಬೇಕು ಮತ್ತು ಮನೆಯ ಯಜಮಾನನ ಜಾತಕವನ್ನು ಪರಿಗಣಿಸಬೇಕು. ಈ ಬಗ್ಗೆ ಗುರೂಜಿ ಅವರು ವಿಡಿಯೋದಲ್ಲಿ ಸಂಪೂರ್ಣ ವಿವರಿಸಿದ್ದಾರೆ ವಿಡಿಯೋ ನೋಡಿ.

ಬೆಂಗಳೂರು, ಆಗಸ್ಟ್​ 25: ಮನೆಗೆ ಕಾಗೆ ಬಂದರೆ ಅಶುಭ ಸಂಕೇತ ಎಂಬ ನಂಬಿಕೆ ಅನೇಕರದ್ದು. ನಮ್ಮ ಸಂಸ್ಕೃತಿಯಲ್ಲಿ ಕಾಗೆಯನ್ನು ಪಿತ್ರುಗಳ ಪ್ರತಿನಿಧಿಯಾಗಿ ಪರಿಗಣಿಸಲಾಗಿದೆ. ಹೀಗಾಗಿ, ಕಾಗೆ ಮನೆಗೆ ಬರುವುದು ಪಿತ್ರುಗಳ ಒಂದು ಸಂದೇಶವಾಗಿರಬಹುದು. ತಕ್ಷಣ ಮನೆ ಬಿಡುವ ಅವಶ್ಯಕತೆ ಇಲ್ಲ. ಬ್ರಾಹ್ಮಿ ಮುಹೂರ್ತ, ಅಭಿಜಿತ್ ಮುಹೂರ್ತ, ಗೋಧೂಳಿ ಮುಹೂರ್ತಗಳಿಗೆ ಪ್ರಾಶಸ್ತ್ಯ ನೀಡುವುದು ಒಳ್ಳೆಯದು. ಮನೆಯ ಯಜಮಾನನ ಜಾತಕವನ್ನು ಪರಿಶೀಲಿಸುವುದು ಸಹ ಮುಖ್ಯ. ಪಂಚಗವ್ಯ ಸಿಂಪರಣೆ ಮತ್ತು ಶಿವ ಪೂಜೆಯಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು. ಎಲ್ಲಾ ಸಂದರ್ಭಗಳಲ್ಲೂ ಮನೆ ಬಿಡಬೇಕು ಎಂಬ ನಿಯಮವಿಲ್ಲ.