ಕುಮಾರಸ್ವಾಮಿ ಚೇತರಿಸಿಕೊಂಡಿದ್ದಾರೆ, ತುಂಬಾ ಹೊತ್ತು ಅವರೊಂದಿಗೆ ಮಾತಾಡಿದೆ: ಯುಟಿ ಖಾದರ್, ವಿಧಾನ ಸಭಾಧ್ಯಕ್ಷರು
ಗಣ್ಯರೊಬ್ಬರು ಅನಾರೋಗ್ಯದಿಂದ ಬಳಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವಾಗ ಅವರಿಗೆ ವಿಶ್ರಾಂತಿ ಬೇಕು ಅಂತ ವೈದ್ಯರು ಹೇಳುತ್ತ್ತಾರೆ. ಆದರೆ ರೋಗಿ ಗಣ್ಯವ್ಯಕ್ತಿಯಾಗಿರುವುದರಿಂದ ಬೇರೆ ಗಣ್ಯರು ಭೇಟಿಯಾಗಲು, ಬೇಗ ಚೇತರಿಸಿಕೊಳ್ಳುವಂತೆ ಹಾರೈಸಲಿ ಬರುತ್ತಲೇ ಇರುತ್ತಾರೆ. ಅದು ಪದ್ಧತಿ ಮಾರಾಯ್ರೇ, ಯಾರೇನೂ ಮಾಡಲಾಗದು.
ಬೆಂಗಳೂರು: ವಿಧಾನ ಸಭಾಧ್ಯಕ್ಷ ಯುಟಿ ಖಾದರ್ (UT Khader) ಇಂದು ನಗರದ ಜಯನಗರದಲ್ಲಿರುವ ಅಪೊಲ್ಲೋ ಆಸ್ಪತ್ರೆಯಲ್ಲಿ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ಬೇಟಿಯಾಗಿ ಆರೋಗ್ಯ ವಿಚಾರಿಸಿದರು. ನಂತರ ಆಸ್ಪತ್ರೆ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕುಮಾರಸ್ವಾಮಿ ಗುಣಮುಖರಾಗಿದ್ದಾರೆ (recovered) ಮತ್ತು ಚೇತರಿಸಿಕೊಂಡಿದ್ದಾರೆ. ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ ಎಂದರು. ರಾಜ್ಯದ ಎಲ್ಲ ಕನ್ನಡಿಗರ ಆಶೀರ್ವಾದ ಅವರ ಮೇಲಿದೆ, ಬಹಳ ಹೊತ್ತು ಅವರೊಂದಿಗೆ ಮಾತಾಡಿರುವುದಾಗಿ ಖಾದರ್ ಹೇಳಿದರು. ಪತ್ರಕರ್ತೆಯೊಬ್ಬರು ಯಾವಾಗ ಡಿಸ್ಚಾರ್ಜ್ ಮಾಡುತ್ತಾರೆ ಅಂತ ಕೇಳಿದ ಪ್ರಶ್ನೆಗೆ ಖಾದರ್, ಡಿಸ್ಚಾರ್ಜ್ ಮಾಡೋದನ್ನು ತಾನು ಹೇಗೆ ಹೇಳಲಾಗುತ್ತೆ? ವೈದ್ಯರು ಅದನ್ನು ನಿರ್ಧರಿಸುತ್ತಾರೆ ಅಂತ ನಗುತ್ತಾ ಹೇಳಿದರು. ಗಣ್ಯರೊಬ್ಬರು ಅನಾರೋಗ್ಯದಿಂದ ಬಳಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವಾಗ ಅವರಿಗೆ ವಿಶ್ರಾಂತಿ ಬೇಕು ಅಂತ ವೈದ್ಯರು ಹೇಳುತ್ತ್ತಾರೆ. ಆದರೆ ರೋಗಿ ಗಣ್ಯವ್ಯಕ್ತಿಯಾಗಿರುವುದರಿಂದ ಬೇರೆ ಗಣ್ಯರು ಭೇಟಿಯಾಗಲು, ಬೇಗ ಚೇತರಿಸಿಕೊಳ್ಳುವಂತೆ ಹಾರೈಸಲಿ ಬರುತ್ತಲೇ ಇರುತ್ತಾರೆ. ಅದು ಪದ್ಧತಿ ಮಾರಾಯ್ರೇ, ಯಾರೇನೂ ಮಾಡಲಾಗದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ