ಬೆಂಗಳೂರು ಜನತೆಗೆ ಕೂಲ್ ಕೂಲ್ ನ್ಯೂಸ್: ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ -ಈ ವಿಡಿಯೋ ವರದಿ ನೋಡಿ
Bangalore Weather Report: ಬೆಂಗಳೂರು ಜನತೆಗೆ ಕೂಲ್ ಕೂಲ್ ನ್ಯೂಸ್ ಇದಾಗಿದ್ದು ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಜೊತೆಗೆ ಸೆಪ್ಟೆಂಬರ್ 2 ರಿಂದ 7 ರವೆರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Bangalore Weather Report: ಬೆಂಗಳೂರು ಜನತೆಗೆ ಕೂಲ್ ಕೂಲ್ ನ್ಯೂಸ್ ಇದಾಗಿದ್ದು (Bangalore Weather Report), ಸೆಪ್ಟೆಂಬರ್ ತಿಂಗಳಲ್ಲಿ (September 2023) ವಾಡಿಕೆಗಿಂತ ಹೆಚ್ಚು ಮಳೆ ಆಗಲಿದೆ. ಜೊತೆಗೆ ಸೆಪ್ಟೆಂಬರ್ 2 ರಿಂದ 7 ರವೆರೆಗೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದ್ದು, ಕೆಲವು ಜಿಲ್ಲೆಗಳಲ್ಲಿಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ (Meteorological department) ತಿಳಿಸಿದೆ. ಆದರೆ ಸದ್ಯಕ್ಕೆ ಶ್ರಾವಣ ಮಾಸದಲ್ಲಿ ಉರಿ ಬಿಸಿಲಿನಿಂದ ಬೆಂಗಳೂರು ಸುಡುತ್ತಿದೆ. ನಗರದಲ್ಲಿ ವಾಡಿಕೆಯಂತೆ 31 ಸೆ.ಮೀ ಮಳೆಯಾಗಬೇಕು. ಆದ್ರೆ ಶೇ. 23ರಷ್ಟು ಮಳೆ ಕೊರತೆ ಇದೆ. ಆಗಸ್ಟ್ನಲ್ಲಿ ಸುಮಾರು 28 ಡಿಗ್ರಿ ಉಷ್ಣಾಂಶ ಇರಬೇಕು. ಆದ್ರೆ, ಈ ಬಾರಿ ಸುಮಾರು 31.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಈ ಮಧ್ಯೆ, ಶ್ರಾವಣ ಮಾಸದಲ್ಲೂ ಧಗಧಗ ಅಂತಿದ್ದ ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಮಳೆರಾಯ ಕೃಪೆ ತೋರಿದ್ದು ಭರ್ಜರಿ ಮಳೆಯಾಗಿದೆ, ನಗರವನ್ನ ಸ್ವಲ್ಪ ಮಟ್ಟಿಗೆ ಕೂಲ್ ಆಗಿಸಿದೆ. ಬೆಂಗಳೂರಷ್ಟೇ ಅಲ್ಲ.. ಹಲವು ಜಿಲ್ಲೆಗಳಲ್ಲೂ ವರುಣನ ಎಂಟ್ರಿ ಕಂಡು ಜನ ಖುಷ್ ಆಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ