Police Marshall: ಇನ್ನು ಮುಂದೆ ಪ್ರತಿ ಕಾಲೇಜ್ನಲ್ಲಿ ಪೊಲೀಸ್ ಮಾರ್ಷಲ್ಗಳಾಗಿ 50 ವಿದ್ಯಾರ್ಥಿಗಳ ನೇಮಕ! ಯಾಕಾಗಿ ಗೊತ್ತಾ!?
ಡ್ರಗ್ಸ್ ಜಾಲಕ್ಕೆ ಬ್ರೇಕ್ ಹಾಕಲು ಪೊಲೀಸ್ ಮಾರ್ಷಲ್ಸ್ಗಳಾಗಲಿದ್ದಾರೆ ಬೆಂಗಳೂರು ಕಾಲೇಜು ಸ್ಟೂಡೆಂಟ್ಸ್. ಇನ್ನು ಮುಂದೆ ಪ್ರತಿ ಕಾಲೇಜ್ನಲ್ಲಿ ಪೊಲೀಸ್ ಮಾರ್ಷಲ್ಗಳಾಗಿ 50 ವಿದ್ಯಾರ್ಥಿಗಳ ನೇಮಕ! ಈ ತಂಡ ಕಾಲೇಜ್ ಸುತ್ತ ಡ್ರಗ್ ಮಾರಾಟ, ಸೇವಿಸೋದು ಕಂಡು ಬಂದ್ರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತೆ. ಜತೆಗೆ ತಮ್ಮ ಸಹಪಾಠಿಗಳಿಗೆ ಡ್ರಗ್ಸ್ ಸೇವನೆಯಿಂದ ಆಗೋ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತೆ.
ಬೆಂಗಳೂರಿನ ಒಡಲಿನಲ್ಲಿ ಆಗಾಗ ನಶೆ ವಾಸನೆ ಬರೋದು ಕಾಮನ್.. ಪೊಲೀಸ್ನವರು ಕೂಡ ಪೆಡ್ಲರ್ಗಳ ಕೈಗೆ ಕೋಳ ತೋಡಿಸ್ತಿರೋದು ಉಂಟು. ಹೀಗಿರುವಾಗ ನಗರದಲ್ಲಿ ಡ್ರಗ್ ಜಾಲವನ್ನ ಇನ್ನಷ್ಟು ವೇಗವಾಗಿ ಪತ್ತೆ ಹಚ್ಚೋಕೆ ಖಾಕಿ ಮತ್ತೊಂದು ಹೆಜ್ಜೆ ಇಟ್ಟಿದೆ.. ಪೊಲೀಸರಿಗೆ ಶಕ್ತಿಯಾಗಿ ಒಂದು ತಂಡ ನಿಂತಿದ್ದು, ಆ ತಂಡ ಇನ್ಮುಂದೆ ಫುಲ್ ಆ್ಯಕ್ಟೀವ್ ಆಗಿರಲಿದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮಾದಕ ವಸ್ತುಗಳ ಗೀಳಿಗೆ ಬಲಿಯಾಗ್ತಿದ್ದಾರೆ. ಅದ್ರಲ್ಲೂ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ, ಮಾರಾಟ ಜಾಲಕ್ಕೆ ಸಿಲುಕಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ತಾರೆ. ಹೀಗಾಗಿ ಇಂಥಾ ಡ್ರಗ್ಸ್ ಜಾಲಗಳಿಗೆ ಬ್ರೇಕ್ ಹಾಕಲು, ನಗರ ಪೊಲೀಸರು ಹೊಸ ಪಡೆಯೊಂದನ್ನ ಹುಟ್ಟು ಹಾಕಿದ್ದಾರೆ. ಅದುವೇ ಸ್ಟೂಡೆಂಟ್ಸ್ ಪೊಲೀಸ್ ಮಾರ್ಷಲ್ಸ್ ಟೀಮ್..
ಪ್ರತಿ ಕಾಲೇಜ್ನಲ್ಲಿ ಸುಮಾರು 50 ವಿದ್ಯಾರ್ಥಿಗಳನ್ನ ಪೊಲೀಸ್ ಮಾರ್ಷಲ್ಸ್ಗಳನ್ನಾಗಿ ನೇಮಿಸಲಾಗುತ್ತೆ. ಈ ತಂಡ ಕಾಲೇಜ್ ಸುತ್ತ ಡ್ರಗ್ ಮಾರಾಟ, ಸೇವಿಸೋದು ಕಂಡು ಬಂದ್ರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುತ್ತೆ. ಜತೆಗೆ ತಮ್ಮ ಸಹಪಾಠಿಗಳಿಗೆ ಡ್ರಗ್ಸ್ ಸೇವನೆಯಿಂದ ಆಗೋ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತೆ. ಚೈನ್ ಲಿಂಕ್ನಂತೆ ತಂಡ ಕೆಲಸ ಮಾಡಲಿದ್ದು, ಹೊಸ ಪ್ರಯತ್ನಕ್ಕೆ ನಗರ ಪೊಲೀಸರು ಕೈ ಹಾಕಿದ್ದಾರೆ.
ನಗರದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಸ್ಟೂಡೆಂಟ್ ಪೊಲೀಸ್ ಮಾರ್ಷಲ್ಸ್ ಪಡೆ ತಲೆ ಎತ್ತಲಿದ್ದು, ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಸುಮಾರು 700 ಮಂದಿ ವಿದ್ಯಾರ್ಥಿಗಳು ಇರಲಿದ್ದಾರೆ. ಈಗಾಗಲೇ ಪ್ರಾಯೋಗಿಕವಾಗಿ ಯಲಹಂಕದಲ್ಲಿ ಸ್ಟೂಡೆಂಟ್ ಮಾರ್ಷಲ್ಸ್ ಪಡೆಗೆ ಚಾಲನೆ ನೀಡಲಾಗಿದೆ. ಅದೇನೆ ಹೇಳಿ ನಶೆ ಮುಕ್ತ ಬೆಂಗಳೂರು ಮಾಡೋಕೆ ಮುಂದಾದ ಖಾಕಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಪೊಲೀಸರ ಈ ಹೊಸ ಪಡೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ