ಕ್ರಿಕೆಟ್ ಮ್ಯಾಚ್ ಯಾವತ್ತೂ ನೋಡಲ್ಲ, ಮ್ಯಾಚ್ ಜಾರಿಯಲ್ಲಿರುವಾಗ ನ್ಯೂಸ್ ಚಾನೆಲ್ ನೋಡುತ್ತೇನೆ: ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಕ್ರಿಕೆಟ್ ಮ್ಯಾಚ್ ಯಾವತ್ತೂ ನೋಡಲ್ಲ, ಮ್ಯಾಚ್ ಜಾರಿಯಲ್ಲಿರುವಾಗ ನ್ಯೂಸ್ ಚಾನೆಲ್ ನೋಡುತ್ತೇನೆ: ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 01, 2023 | 4:30 PM

ಮೊನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯನ್ನು ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಕ್ರಿಕೆಟ್ ಆಗಲಿ ಅಥವಾ ಬೇರೆ ಯಾವುದೇ ಕ್ಷೇತ್ರವಾಗಲೀ, ಸೂರ್ಯ ಚಂದ್ರ ಇರೋವರೆಗೆ ಭಾರತೀಯರು ಗೆಲ್ಲುತ್ತಲೇ ಇರಬೇಕು ಎಂದು ಯತ್ನಾಳ್ ಹೇಳುತ್ತಾರೆ.

ವಿಜಯಪುರ: ನಾಳೆ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಶ್ರೀಲಂಕಾದ ಕ್ಯಾಂಡಿಯಲ್ಲಿ ಏಷ್ಯಾ ಕಪ್-2023 ಟೂರ್ನಿಯ (Asia Cup-2023 Cricket tournament) ಪಂದ್ಯ ನಡೆಯಲಿದೆ.  ಕೋಟ್ಯಾಂತರ ಭಾರತೀಯರು ನಾಳೆ ಟಿವಿಗಳ ಮುಂದೆ ಕೂತವರು ಪಂದ್ಯ ಮುಗಿಯದ ಹೊರತು ಮೇಲೇಳಲಾರರು. ಆದರೆ ವಿಜಯಪುರದ ಫೈರ್ ಬ್ರ್ಯಾಂಡ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ (Basanagouda Patil Yatnal) ಕ್ರಿಕೆಟ್ ಅಂದರೆ ಅಲರ್ಜಿಯಂತೆ. ಅವರು ಕ್ರಿಕೆಟ್ ಪಂದ್ಯಗಳನ್ನು ನೋಡೋದೆ ಇಲ್ವಂತೆ ಮಾರಾಯ್ರೇ. ಬೇರೆಯವರು ಟಿವಿ ಮುಂದೆ ಕೂತು ನೋಡುತ್ತಿದ್ದರೆ ಅವರು ಚ್ಯಾನೆಲ್ ಬದಲಾಯಿಸಿ ನ್ಯೂಸ್ ಚಾನೆಲ್ ಹಾಕ್ಕೊಳ್ಳುತ್ತಾರಂತೆ. ಓಕೆ ಸರಿ ಗೌಡ್ರೆ, ಟೀಂ ಇಂಡಿಯಾ ಏನು ಹೇಳಬಯಸುತ್ತೀರಿ ಅಂತ ಕೇಳಿದರೆ ಅಭಿಮಾನದಿಂದ, ‘ಗೆಲ್ಲಲಿ’ ಅಂತ ಹೇಳುತ್ತೇನೆ ಅನ್ನುತ್ತಾರೆ. ಮೊನ್ನೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ವಿಕ್ರಮ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿಸಿ ವಿಶ್ವದಲ್ಲಿ ಯಾರೂ ಮಾಡದ ಸಾಧನೆಯನ್ನು ನಮ್ಮ ವಿಜ್ಞಾನಿಗಳು ಮಾಡಿದ್ದಾರೆ. ಕ್ರಿಕೆಟ್ ಆಗಲಿ ಅಥವಾ ಬೇರೆ ಯಾವುದೇ ಕ್ಷೇತ್ರವಾಗಲೀ, ಸೂರ್ಯ ಚಂದ್ರ ಇರೋವರೆಗೆ ಭಾರತೀಯರು ಗೆಲ್ಲುತ್ತಲೇ ಇರಬೇಕು ಎಂದು ಯತ್ನಾಳ್ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ