ಮೈಸೂರು ಮಕ್ಕಳ ಕೈಗೆ ಕಟ್ಟಿದ್ದ ರಾಖಿಗಳನ್ನು ತೆಗೆಸಿದ ಖಾಸಗಿ ಶಾಲೆ ಶಿಕ್ಷಕರು; ಪೋಷಕರ ಪ್ರತಿಭಟನೆ

ಮೈಸೂರು ಮಕ್ಕಳ ಕೈಗೆ ಕಟ್ಟಿದ್ದ ರಾಖಿಗಳನ್ನು ತೆಗೆಸಿದ ಖಾಸಗಿ ಶಾಲೆ ಶಿಕ್ಷಕರು; ಪೋಷಕರ ಪ್ರತಿಭಟನೆ

ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Sep 01, 2023 | 3:31 PM

ಮಕ್ಕಳ ಕೈಗೆ ಕಟ್ಟಿದ್ದ ರಾಖಿಗಳನ್ನು ಮೈಸೂರಿನ ಜಗನ್ಮೋಹನ ಅರಮನೆ ಬಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಶಿಕ್ಷಕರು ತೆಗೆಸಿರುವ ಆರೋಪ ಕೇಳಿಬಂದಿದ್ದು, ಶಾಲೆ ಮುಂದೆ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಸ್ಥಳೀಯ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ಸಾಥ್ ನೀಡಿದ್ದಾರೆ.

ಮೈಸೂರು: ರಾಜ್ಯಾದ್ಯಂತ ಗುರುವಾರ ರಕ್ಷಾಬಂಧನ (Raksha Bandhan) ಆಚರಿಸಲಾಯಿತು. ಮಕ್ಕಳ ಕೈಗೆ ಕಟ್ಟಿದ್ದ ರಾಖಿಗಳನ್ನು ಮೈಸೂರಿನ (Mysore) ಜಗನ್ಮೋಹನ ಅರಮನೆ ಬಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ಶಿಕ್ಷಕರು (Teacher) ತೆಗೆಸಿರುವ ಆರೋಪ ಕೇಳಿಬಂದಿದ್ದು, ಶಾಲೆ ಮುಂದೆ ಪೋಷಕರು ಪ್ರತಿಭಟನೆ ಮಾಡುತ್ತಿದ್ದಾರೆ. ಪೋಷಕರ ಪ್ರತಿಭಟನೆಗೆ ಸ್ಥಳೀಯ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಮಾಜಿ ನಗರಪಾಲಿಕೆ ಸದಸ್ಯ ಪ್ರಶಾಂತ್ ಗೌಡ, ಹಿಂದೂ ಪರ ಸಂಘಟನೆ ಮುಖಂಡ ಲೋಹಿತ್ ಅರಸ್ ಸಾಥ್ ನೀಡಿದ್ದಾರೆ.

ಅಲ್ಲದೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಭಾತೃತ್ವದ ಸಂಕೇತವಾಗಿ ಮಕ್ಕಳ ಕೈಗೆ ರಾಖಿ ಕಟ್ಟಲಾಗಿದೆ. ಇಂತಹ ರಾಖಿಗಳನ್ನು ಕತ್ತರಿಸಿ ಹಾಕಿರುವ ಶಾಲಾ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣ ಕಡೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇನ್ನು ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಿಶೋರ್ ಕುಮಾರ್ ಎಂಬುವರು ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.