ಚಂದ್ರಯಾನ 3 ಯಶಸ್ವಿ; ವಿಭಿನ್ನವಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ ಉಪನ್ಯಾಸಕ; ಹೇಗೆ ಅಂತೀರಾ? ಇಲ್ಲಿದೆ ವಿಡಿಯೋ

ಚಂದ್ರಯಾನ 3 ಯಶಸ್ವಿ; ವಿಭಿನ್ನವಾಗಿ ಇಸ್ರೋಗೆ ಅಭಿನಂದನೆ ಸಲ್ಲಿಸಿದ ಉಪನ್ಯಾಸಕ; ಹೇಗೆ ಅಂತೀರಾ? ಇಲ್ಲಿದೆ ವಿಡಿಯೋ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 01, 2023 | 4:21 PM

ಕೆಜಿಎಫ್​ನ ರಾಬರ್ಟ್​ಸನ್​ ಪೇಟೆ ಗಾಂಧಿ ಪ್ರತಿಮೆ ಎದುರಲ್ಲಿ ವಿಭಿನ್ನ ಪ್ರಯೋಗ ಮಾಡಿದ ಉಪನ್ಯಾಸಕ ಪ್ರತಾಪ್​, ಒಡೆದ ಗಾಜಿನ ಚೂರುಗಳ ಮೇಲೆ ನಿಂತು, ಗಾಜಿನ ಚೂರುಗಳಿಂದ ಇಸ್ರೋ, ಚಂದ್ರಯಾನ, ಹಾಗೂ ಪ್ರಜ್ನಾನ್​ ಜೊತೆಗೆ ಭಾರತದ ನಕ್ಷೆ ಬರೆಯುವ ಮೂಲಕ ವಿಭಿನ್ನವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಕೋಲಾರ, ಸೆ.01: ಇಸ್ರೋದಿಂದ ಚಂದ್ರಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಕೋಲಾರ (Kolar) ಜಿಲ್ಲೆಯ ಕೆಜಿಎಫ್​ನ ಪ್ರತಾಪ್​ ಕುಮಾರ್ ಎಂಬುವರು ವಿಭಿನ್ನವಾಗಿ ಇಸ್ರೋಗೆ (ISRO) ಅಭಿನಂಧನೆ ಸಲ್ಲಿಸಿದ್ದಾರೆ. ಕೆಜಿಎಫ್​ನ ರಾಬರ್ಟ್​ಸನ್​ ಪೇಟೆ ಗಾಂಧಿ ಪ್ರತಿಮೆ ಎದುರಲ್ಲಿ ವಿಭಿನ್ನ ಪ್ರಯೋಗ ಮಾಡಿದ ಉಪನ್ಯಾಸಕ ಪ್ರತಾಪ್​, ಒಡೆದ ಗಾಜಿನ ಚೂರುಗಳ ಮೇಲೆ ನಿಂತು, ಗಾಜಿನ ಚೂರುಗಳಿಂದ ಇಸ್ರೋ, ಚಂದ್ರಯಾನ, ಹಾಗೂ ಪ್ರಜ್ನಾನ್​ ಜೊತೆಗೆ ಭಾರತದ ನಕ್ಷೆ ಬರೆಯುವ ಮೂಲಕ ವಿಭಿನ್ನವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಇಂದಿನ ಯುವ ಪೀಳಿಗೆ ಮದ್ಯದ ನಶೆಯಲ್ಲಿ ಕಳೆದುಹೋಗುತ್ತಿದೆ. ಗಾಂಜಾ, ಕುಡಿತದ ನಶೆಯ ಅಭ್ಯಾಸ ಕಲಿತು ಯುವ ಜನತೆ ಅಡ್ಡದಾರಿ ಹಿಡಿಯುತ್ತಿದ್ದು, ಯುವಕರು ಮದ್ಯ ಹಾಗೂ ದುಶ್ಚಟಗಳನ್ನು ಹೀಗೆ ಕಾಲಿನ ಕೆಳಗೆ ಹಾಕಿಕೊಂಡು ಇಸ್ರೋದ ಸಾಧನೆಯ ರೀತಿಯಲ್ಲಿ ಯುವಕರು ಕೂಡ ವಿವಿಧ ರೀತಿಯ ಸಾಧನೆ ಮಾಡುವ ಮೂಲಕ ದೇಶಕ್ಕೆ ಆಸ್ತಿಯಾಗಬೇಕು ಎಂದು ಸಂದೇಶ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್​ ಮಾಡಿ