ಬಡ ವಿದ್ಯಾರ್ಥಿಗಳು ಇನ್​​ಕಮ್​​​ ಸರ್ಟಿಫಿಕೇಟ್​​ ಮಾಡಿಸುವುದರ ಫಜೀತಿ ವಿವರಿಸಿದ ಸಿಎಂ ಸಿದ್ದರಾಮಯ್ಯ

ಬಡ ವಿದ್ಯಾರ್ಥಿಗಳು ಇನ್​​ಕಮ್​​​ ಸರ್ಟಿಫಿಕೇಟ್​​ ಮಾಡಿಸುವುದರ ಫಜೀತಿ ವಿವರಿಸಿದ ಸಿಎಂ ಸಿದ್ದರಾಮಯ್ಯ

ಸಾಧು ಶ್ರೀನಾಥ್​
|

Updated on: Sep 01, 2023 | 4:49 PM

ಆದಾಯ ದೃಢೀಕರಣ ಪ್ರಮಾಣ ಪತ್ರ ಪಡೆಯುದೇ ದುಸ್ಸಾಹಸವಾಗುತ್ತಿತ್ತು. ಇದನ್ನು ಸ್ವಯಂ ತಾವೂ ಅನುಭವಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಸಂದರ್ಭವನ್ನು ತಿಳಿಹಾಸ್ಯದಲ್ಲಿ ಮನಮುಟ್ಟುವಂತೆ ಕಾರ್ಯಕ್ರಮದಲ್ಲಿ ಹೇಳಿದರು. ಅಂದಹಾಗೆ ನಿಗದಿತ ಮೊತ್ತದ ಆದಾಯ ಪತ್ರ ಪಡೆದಿದ್ದರೆ ಇಂದು ಬಹುಶಃ ತಾವು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅಬ್ಬಬ್ಬಾ ಅಂದ್ರೆ ಕಾಲೇಜಿನಲ್ಲಿ ಪ್ರೊಫೆಸರ್​​ ಆಗಿರುತ್ತಿದ್ದೆ ಎಂದು ಸಿದ್ದರಾಮಯ್ಯನವರು ಅಂದು ತಾವು ಪಟ್ಟ ಬವಣೆಯ ಬಗ್ಗೆ ವಿವರಿಸಿದರು.

ದೇವರಾಜ ಅರಸು ಜಯಂತ್ಯೋತ್ಸವ ಅಂಗವಾಗಿ ನಿನ್ನೆ ಗುರುವಾರ ರಾಜ್ಯ ಮಟ್ಟದ ಸಮಾವೇಶ ಏರ್ಪಡಿಸಲಾಗಿತ್ತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಟೌನ್‌ ಹಾಲ್‌ ನ ಪುರಭವನದಲ್ಲಿ ನಡೆದ ಕಾರ್ಯಕ್ರಮ ಅದು. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು. ದೇವರಾಜ್ ಅರಸು ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡಿದರು. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 1968ರಲ್ಲಿ ಬಿಎಸ್​​ಸಿ ಪದವಿ ವ್ಯಾಸಂಗ ಮಾಡುವಾಗ ಆದಾಯ ಸರ್ಟಿಫಿಕೇಟ್​​ ಮಾಡಿಸುವುದಕ್ಕೆ ತಾವು ಪಟ್ಟ ಪಡಿಪಾಟಲನ್ನು ವಿವರಿಸಿದರು. ಸರ್ಕಾರದ ಕೆಲವು ಸವಲತ್ತುಗಳನ್ನು ಪಡೆಯಬೇಕು ಅಂದ್ರೆ ಆ ಕಾಲಕ್ಕೆ ಆದಾಯ ಮಿತಿಯಿತ್ತು. ವಾರ್ಷಿಕ 1,200 ರೂಪಾಯಿಗಿಂತ ಕಡಿಮೆ ಆದಾಯವಿದ್ದರೆ, ಮತ್ತು ಅದನ್ನು ದೃಡೀಕರಿಸಲು ತಹಸೀಲ್ದಾರ್​​ ಕೊಡಮಾಡುವ ವಾರ್ಷಿಕ ಆದಾಯ ದೃಢೀಕರಣ ಪ್ರಮಾಣ ಪತ್ರ (Annual Income Certificate) ಇದ್ದರೆ ಆ ಸೌಲಭ್ಯಗಳನ್ನು ಪಡೆಯಬಹುದಾಗಿತ್ತು. ಆದರೆ ಆ ಆದಾಯ ದೃಢೀಕರಣ ಪ್ರಮಾಣ ಪತ್ರ ಪಡೆಯುದೇ ದುಸ್ಸಾಹಸವಾಗುತ್ತಿತ್ತು. ಇದನ್ನು ಸ್ವಯಂ ತಾವೂ ಅನುಭವಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿನ ಸಂದರ್ಭವನ್ನು ತಿಳಿಹಾಸ್ಯದಲ್ಲಿ ಮನಮುಟ್ಟುವಂತೆ ಕಾರ್ಯಕ್ರಮದಲ್ಲಿ ಹೇಳಿದರು. ಅದನ್ನು ಅವರ ಬಾಯಿಂದಲೇ ಕೇಳಿ ನೋಡಿ. ಅಂದಹಾಗೆ ನಿಗದಿತ ಮೊತ್ತದ ಆದಾಯ ಪತ್ರ ಪಡೆದಿದ್ದರೆ ಇಂದು ಬಹುಶಃ ತಾವು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅಬ್ಬಬ್ಬಾ ಅಂದ್ರೆ ಪ್ರೊಫೆಸರ್​​ ಆಗಿ ಕಾಲೇಜಿನಲ್ಲಿ ಪಾಠ ಮಾಡಿಕೊಂಡು ಇರುತ್ತಿದ್ದೆನೇನೂ ಎಂದು ಸಿದ್ದರಾಮಯ್ಯನವರು ಅಂದು ತಾವು ಪಟ್ಟ ಬವಣೆಯ ಬಗ್ಗೆ ವಿವರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ