ಪ್ರಜ್ವಲ್ ರೇವಣ್ಣ ಪ್ರಕರಣ; ನ್ಯಾಯಾಲಯದ ತೀರ್ಪು ಸಂತಸ ನೀಡಿದೆ, ಇದು ಎಲ್ಲ ರಾಜಕೀಯ ಧುರೀಣರಿಗೆ ಪಾಠವಾಗಬೇಕು: ಎ ಮಂಜು
ಚುನಾವಣಾ ಸಂದರ್ಭದಲ್ಲಿ ಪ್ರಜ್ವಲ್ ಫಾರಂ ನಂ 26 ರಲ್ಲಿ ತಪ್ಪು ಮಾಹಿತಿ ನೀಡಿದ್ದರು ಮತ್ತ್ತು ನ್ಯಾಯಾಲಯದಲ್ಲಿ ಅದು ಸಾಬೀತಾಗಿದೆ, ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಮತ್ತು ಸಂತೋಷ ಕೂಡ ಆಗುತ್ತಿದೆ ಎಂದು ಹೇಳಿದರು. ಹೈಕೋರ್ಟ್ ತೀರ್ಪು ಎಲ್ಲ ರಾಜಕೀಯ ಧುರೀಣರಿಗೆ ಪಾಠವಾಗಬೇಕು. 2019 ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜು ಈಗ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದರೆ!
ಬೆಂಗಳೂರು: 2019ರ ಲೋಕಸಭಾ ಚುನಾವಣಾ (Lok Sabha Polls-2019) ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಪ್ರಜ್ವಲ್ ರೇವಣ್ಣ (Prajwal Revanna) ತಪ್ಪು ಮಾಹಿತಿ ನೀಡಿದ್ದು ಸಾಬಿತಾಗಿರುವುದರಿಂದ ಹೈಕೋರ್ಟ್ ಅವರ ಸಂಸತ್ ಸದಸ್ಯತ್ವವನ್ನು ಅಸಿಂಧುಗೊಳಿಸಿದೆ. ಆಗ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದ ಎ ಮಂಜು (A Manju), ತಪ್ಪು ಮಾಹಿತಿ ನೀಡಿದ ಬಗ್ಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲೇ ಟಿವಿ9 ಕನ್ನಡ ವಾಹಿನಿಯ ಬೆಂಗಳೂರು ವರದಿಗಾರ ಮಂಜರನ್ನು ನಗರದಲ್ಲಿ ಮಾತಾಡಿಸಿದಾಗ ಕೋರ್ಟ್ ತೀರ್ಪಿನ ಬಗ್ಗೆ ಅವರು ಹರ್ಷ ವ್ಕಕ್ತಪಡಿಸಿದರು. ಚುನಾವಣಾ ಸಂದರ್ಭದಲ್ಲಿ ಪ್ರಜ್ವಲ್ ಫಾರಂ ನಂ 26 ರಲ್ಲಿ ತಪ್ಪು ಮಾಹಿತಿ ನೀಡಿದ್ದರು ಮತ್ತ್ತು ನ್ಯಾಯಾಲಯದಲ್ಲಿ ಅದು ಸಾಬೀತಾಗಿದೆ, ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ ಮತ್ತು ಸಂತೋಷ ಕೂಡ ಆಗುತ್ತಿದೆ ಎಂದು ಹೇಳಿದರು. ಹೈಕೋರ್ಟ್ ತೀರ್ಪು ಎಲ್ಲ ರಾಜಕೀಯ ಧುರೀಣರಿಗೆ ಪಾಠವಾಗಬೇಕು. 2019 ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಜು ಈಗ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದರೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ