ಗಂಡನ ಮನೆಯ ಬೀಗ ಮುರಿದ ಶ್ರೀಲೀಲಾ ತಾಯಿ ಸ್ವರ್ಣಲತಾ; ಇಲ್ಲಿದೆ ವಿಡಿಯೋ

Edited By:

Updated on: Oct 05, 2022 | 2:38 PM

Sreeleela mother Swarnalatha: ಶ್ರೀಲೀಲಾ ತಾಯಿ ಸ್ವರ್ಣಲತಾ ಅವರ ವಿರುದ್ಧ ಆರೋಪ ಕೇಳಿಬಂದಿದೆ. ಕೋರಮಂಗಲದ ಪ್ರೆಸ್ಟೀಜ್​​ ಅಪಾರ್ಟ್​​​ಮೆಂಟ್​​ನಲ್ಲಿರುವ ಫ್ಲ್ಯಾಟ್​ನ ಬೀಗವನ್ನು ಒಡೆಸುತ್ತಿರುವ ವಿಡಿಯೋ ಲಭ್ಯವಾಗಿದೆ.

ನಟಿ ಶ್ರೀಲೀಲಾ (Sreeleela) ಅವರು ತಾಯಿ ಸ್ವರ್ಣಲತಾ (Swarnalatha) ವಿರುದ್ಧ ದೂರು ದಾಖಲಾಗಿದೆ. ಅವರ ಪತಿ ಸುಭಾಕರ್ ರಾವ್ ಅವರು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ‘ನನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಬೀಗ ಒಡೆದು ನನ್ನ ಮನೆಗೆ ನುಗ್ಗಿದ್ದಾರೆ’ ಎಂದು ಸುಭಾಕರ್ ರಾವ್ ತಿಳಿಸಿದ್ದಾರೆ. ಬೆಂಗಳೂರಿನ ಕೋರಮಂಗಲದ ಪ್ರೆಸ್ಟೀಜ್​​ ಅಪಾರ್ಟ್​​​ಮೆಂಟ್​​ನಲ್ಲಿರುವ ಫ್ಲ್ಯಾಟ್​ನ ಬೀಗವನ್ನು ಒಡೆಸುತ್ತಿರುವ ವಿಡಿಯೋ ಲಭ್ಯವಾಗಿದೆ. ಅಕ್ಟೋಬರ್​ 3ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

 

Loading...
Unable to load recommendations.
Follow Us
TV9 Web

TV9 Kannada

Read More