‘ಮತ್ತಷ್ಟು ಮೇಲಕ್ಕೆ ಎರುತ್ತೀರಿ’; ನಟಿ ಶ್ರೀನಿಧಿ ಶೆಟ್ಟಿಗೆ ಸಿಕ್ತು ದೈವದ ಅಭಯ

|

Updated on: May 08, 2024 | 8:25 AM

ಮಂಗಳೂರಿನ ಹೊರವಲಯದಲ್ಲಿರೋ ಕಿನ್ನಿಗೋಳಿಯ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆದಿದೆ. ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದರಲ್ಲಿ ಶ್ರೀನಿಧಿ ಶೆಟ್ಟಿ ಹಾಗೂ ಅವರ ಕುಟುಂಬದವರು, ಸಂಬಂಧಿಕರು ಪಾಲ್ಗೊಂಡರು.

ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ‘ಕೆಜಿಎಫ್’​ ಸಿನಿಮಾದಲ್ಲಿ ನಟಿಸಿ ಫೇಮಸ್ ಆದವರು. ಅವರ ಹುಟ್ಟೂರು ಮಂಗಳೂರು. ಅವರು ಹಾಗೂ ಅವರ ಕುಟುಂಬ ದೈವಗಳಿಗೆ ಹೆಚ್ಚು ನಡೆದುಕೊಳ್ಳುತ್ತದೆ. ಹೀಗಾಗಿ ಅವರು ತಮ್ಮ ಕುಟುಂಬದ ದೈವಗಳಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ. ಮಂಗಳೂರಿನ ಹೊರವಲಯದಲ್ಲಿರೋ ಕಿನ್ನಿಗೋಳಿಯ ತಾಳಿಪಾಡಿ ಗುತ್ತುವಿನಲ್ಲಿ ಈ ಹರಕೆ ನೇಮೋತ್ಸವ ನಡೆದಿದೆ. ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆಸಲಾಯಿತು. ಇದರಲ್ಲಿ ಶ್ರೀನಿಧಿ ಶೆಟ್ಟಿ ಹಾಗೂ ಅವರ ಕುಟುಂಬದವರು, ಸಂಬಂಧಿಕರು ಪಾಲ್ಗೊಂಡರು. ತಮ್ಮ ಯಶಸ್ಸಿನ ಹಿಂದೆ ಕುಟುಂಬದ ದೈವಗಳ ಆಶೀರ್ವಾದ ಇದ್ದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ಹರಕೆ ಹೇಳಿಕೊಂಡಿದ್ದರು ಶ್ರೀನಿಧಿ. ‘ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀರಿ’ ಎಂದು ದೈವಗಳು ಇದೇ ಸಂದರ್ಭ ಶ್ರೀನಿಧಿ ‌ಶೆಟ್ಟಿಗೆ ಅಭಯ ನೀಡಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.