SSLC Exams: ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು; ಪರೀಕ್ಷೆ ಮಕ್ಕಳಿಗೆ, ಆತಂಕ ಪೋಷಕರಿಗೆ!

Updated on: Mar 31, 2023 | 10:52 AM

ಕೆಲ ತಂದೆತಾಯಿಗಳಂತೂ ಮಕ್ಕಳ ಪರೀಕ್ಷೆ ಮುಗಿಯುವವರೆಗೆ ತಮ್ಮ ದೇವರನ್ನು ನೆನಸುತ್ತಾ ಶಾಲೆಯಿಂದ ದೂರ ಮರಗಿಡಗಳ ನೆರಳಲ್ಲಿ ಕೂತಿರುತ್ತಾರೆ!

ಬೆಂಗಳೂರು: ಈಗಾಗಲೇ ವರದಿ ಮಾಡಿರುವಂತೆ ರಾಜ್ಯಾದಂತ ಇಂದಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು (SSLC Exams) ಆರಂಭಗೊಂಡಿವೆ. ವಿದ್ಯಾರ್ಥಿಗಳ ಬದುಕಿನಲ್ಲಿ ಹತ್ತನೇ ತರಗತಿ ಒಂದು ಪ್ರಮುಖ ಮತ್ತು ನಿರ್ಣಾಯಕ ಘಟ್ಟ (crucial phase). ಮಕ್ಕಳಿಗೆ ವರ್ಷವಿಡೀ ಓದಿ ಪರೀಕ್ಷೆಗೆ ತಯಾರಿಗಿದ್ದರೂ ಒಂದು ಬಗೆಯ ಆತಂಕವಂತೂ ಇದ್ದೇ ಇರುತ್ತದೆ. ಆದರೆ ಅವರಿಗಿಂತ ಹೆಚ್ಚು ಆತಂಕ, ಗಾಬರಿ ಪೋಷಕರಿಗಿರುತ್ತದೆ (parents). ನಗರದ ಶಾಲೆಯೊಂದರ ಮುಂದೆ ಕೆಲ ಆತಂಕಿತ ಪೋಷಕರನ್ನು ನೋಡಬಹುದು. ಕೆಲ ತಂದೆತಾಯಿಗಳಂತೂ ಮಕ್ಕಳ ಪರೀಕ್ಷೆ ಮುಗಿಯುವವರೆಗೆ ತಮ್ಮ ದೇವರನ್ನು ನೆನಸುತ್ತಾ ಶಾಲೆಯಿಂದ ದೂರ ಮರಗಿಡಗಳ ನೆರಳಲ್ಲಿ ಕೂತಿರುತ್ತಾರೆ! ರಾಜ್ಯದ 3,305 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವ ಎಲ್ಲ 8,42,811 ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More