ನಗುತ್ತಾ ಅರ್ ಅಶೋಕ ಮನೆಯೊಳಗಡೆ ಹೋದ ಎಸ್ ಟಿ ಸೋಮಶೇಖರ್ ಭುಸುಗುಡುತ್ತಾ ಹೊರಬಂದರು!

ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2023 | 6:43 PM

ಸೋಮಶೇಖರ್ ಕೋಪದಲ್ಲಿ ಮಾತಾಡುವಾಗ ಅಶೋಕ ಅದೇ ಪ್ಯಾಲಿನಗೆ ಬೀರುತ್ತಾರೆ. ಸೋಮಶೇಖರ್ ತಮ್ಮ ಮಾನಸಿಕ ತುಮುಲವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ, ತನ್ನನ್ನು ಕಾಂಗ್ರೆಸ್ ಗೆ ಕಳಿಸಲು ಬಿಜೆಪಿ ಸಿದ್ಧವಾಗಿದೆ ಅನ್ನೋ ಅರ್ಥದಲ್ಲಿ ಮಾತಾಡಿದ್ದರು. ವಿಡಿಯೋ ನೋಡುತ್ತಿದ್ದರೆ, ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇಲ್ಲವೆನಿಸುತ್ತದೆ.

ಬೆಂಗಳೂರು: ಸೋಮಶೇಖರ್ ತನ್ನನ್ನು ಭೇಟಿಯಾಗಲು ಬಂದಿದ್ದರು, ತಮ್ಮಿಬ್ಬರ ನಡುವೆ ಸುಮಾರು ಒಂದು ಗಂಟೆಕಾಲ ಮಾತುಕತೆ ನಡೆಯಿತು, ಅವರಿಗೆ ಚೆನ್ನಾಗಿ ಬುದ್ದಿ ಹೇಳಿ ಕಳಿಸಿದ್ದೇನೆ, ಅವರು ಪಕ್ಷ ಬಿಡಲಾರರು ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಬಗ್ಗೆ ಪಕ್ಷದ ಇನ್ನೊಬ್ಬ ಶಾಸಕ ಅರ್ ಅಶೋಕ (R Ashoka) ಒಂದು ಕಡೆ ಹೇಳುತ್ತಾರೆ. ಆದರೆ ಅವರಿಬ್ಬರ ಭೇಟಿ ಮತ್ತು ಮಾತುಕತೆ ಹೇಗೆ ನಡೆದಿರಬಹುದು ಅನ್ನೋದನ್ನು ಈ ವಿಡಿಯೋ ಸೂಚ್ಯವಾಗಿ ಹೇಳುತ್ತದೆ. ಅಶೋಕ ಅವರೊಂದಿಗೆ ಮಾತುಕತೆ ನಡೆಸಿ ಹೊರಬರುವ ಸೋಮಶೇಖರ್ ಮುಖಭಾವ ನೋಡಿ. ದುರ್ದಾನ ತೆಗೆದುಕೊಂಡವರಂತೆ ಹೊರ ಬೀಳುತ್ತಾರೆ. ಅವರ ಮುಖದಲ್ಲಿ ಕೋಪ (anger), ಸಿಡಿಮಿಡಿತನ ಸ್ಪಷ್ಟವಾಗಿ ಗುರುತಿಸಬಹುದು. ಅಶೋಕ ಕೂಡ ಹೊರಬರುತ್ತಾರೆ, ಅವರ ಮುಖದಲ್ಲಿ ಪ್ಯಾಲಿತನ ಗೋಚರಿಸುತ್ತದೆ. ಸೋಮಶೇಖರ್ ಅಶೋಕ ಕಡೆ ಕೈ ಮಾಡಿ ಏನೋ ಹೇಳುತ್ತಾರೆ, ಅದರೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಸೋಮಶೇಖರ್ ಕೋಪದಲ್ಲಿ ಮಾತಾಡುವಾಗ ಅಶೋಕ ಅದೇ ಪ್ಯಾಲಿನಗೆ ಬೀರುತ್ತಾರೆ. ಸೋಮಶೇಖರ್ ತಮ್ಮ ಮಾನಸಿಕ ತುಮುಲವನ್ನು ಮಾಧ್ಯಮಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ, ತನ್ನನ್ನು ಕಾಂಗ್ರೆಸ್ ಗೆ ಕಳಿಸಲು ಬಿಜೆಪಿ ಸಿದ್ಧವಾಗಿದೆ ಅನ್ನೋ ಅರ್ಥದಲ್ಲಿ ಮಾತಾಡಿದ್ದರು. ವಿಡಿಯೋ ನೋಡುತ್ತಿದ್ದರೆ, ಅವರು ಹೇಳಿದ್ದರಲ್ಲಿ ಉತ್ಪ್ರೇಕ್ಷೆ ಇಲ್ಲವೆನಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.