AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾತಾವರಣ ತಿಳಿಯಾದರೆ ಬಿಜೆಪಿಯಲ್ಲೇ ಮುಂದುವರಿಯುವೆ, ತಿಳಿಯಾಗುವ ಬಗ್ಗೆ ಸಂಪೂರ್ಣ ಭರವಸೆ ಇದೆ: ಎಸ್ ಟಿ ಸೋಮಶೇಖರ್, ಶಾಸಕ

ವಾತಾವರಣ ತಿಳಿಯಾದರೆ ಬಿಜೆಪಿಯಲ್ಲೇ ಮುಂದುವರಿಯುವೆ, ತಿಳಿಯಾಗುವ ಬಗ್ಗೆ ಸಂಪೂರ್ಣ ಭರವಸೆ ಇದೆ: ಎಸ್ ಟಿ ಸೋಮಶೇಖರ್, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 22, 2023 | 5:31 PM

Share

ಪಕ್ಷದ ವರಿಷ್ಠರ ಬಗ್ಗೆ ಹೆಚ್ಚಿನ ವಿಶ್ವಾಸ ವ್ಕಕ್ತಪಡಿಸಿದ ಅವರು, ಬಿಎಸ್ ಯಡಿಯೂರಪ್ಪ ಈಗಾಗಲೇ ತಮ್ಮೊಂದಿಗೆ ಮಾತಾಡಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಅಂತ ಹೇಳಿದರು. ಬಿಜೆಪಿ ಹೈಕಮಾಂಡ್ ಸಹ ಕೊಟ್ಟ ಮಾತಿಗೆ ಯಾವತ್ತೂ ತಪ್ಪಿಲ್ಲ ಎಂದು ಸೋಮಶೇಖರ್ ಹೇಳಿದರು.

ಬೆಂಗಳೂರು: ತಮ್ಮ ಕ್ಷೇತ್ರ ಯಶವಂತಪುರದಲ್ಲಿ ಅಹಿತಕರ ಮತ್ತು ಪ್ರತಿಕೂಲ ವಾತಾವರಣ ಸೃಷ್ಟಿಯಾಗಿದೆ, ಅದು ತಿಳಿಯಾಗದ ಹೊರತು, ಬಿಜೆಪಿಯಲ್ಲಿ ಮುಂದುವರಿಯಲಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (ST Somashekhar) ಹೇಳುತ್ತಾರೆ. ಟಿವಿ9 ಕನ್ನಡ ವಾಹಿನಿಯೊಂದಿಗೆ ನಡೆಸಿದ ಎಕ್ಸ್ ಕ್ಲ್ಯೂಸಿವ್ ಮಾತುಕತೆಯಲ್ಲಿ ಮನಬಿಚ್ಟಿ ಮಾತಾಡಿರುವ ಎಸ್ಟಿಎಸ್, ವಾತಾವಾರಣ ತಿಳಿಯಾಗದಿದ್ದರೆ ಪಕ್ಷ ಬಿಟ್ಟು ಕಾಂಗ್ರೆಸ್ ಗೆ ವಾಪಸ್ಸು ಹೋಗುತ್ತೀರಾ ಅಮತ ಕೇಳಿದ ಪ್ರಶ್ನೆಗೆ ಅವರು ಅಂಥ ಪರಿಸ್ಥಿತಿ ತಲೆದೋರದು ಎಂಬ ಖಾತ್ರಿಯಿದೆ, ಪರಿಸ್ಥಿತಿ ತಿಳಿಯಾಗುವ ಬಗ್ಗೆ ಶೇಕಡ 100 ರಷ್ಟು ಭರವಸೆ ಇದೆ ಎಂದು ಹೇಳಿದರು. ಪಕ್ಷದ ವರಿಷ್ಠರ ಬಗ್ಗೆ ಹೆಚ್ಚಿನ ವಿಶ್ವಾಸ ವ್ಕಕ್ತಪಡಿಸಿದ ಅವರು, ಬಿಎಸ್ ಯಡಿಯೂರಪ್ಪ (BS Yediyurappa) ಈಗಾಗಲೇ ತಮ್ಮೊಂದಿಗೆ ಮಾತಾಡಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಅಂತ ಹೇಳಿದರು. ಬಿಜೆಪಿ ಹೈಕಮಾಂಡ್ (high command) ಸಹ ಕೊಟ್ಟ ಮಾತಿಗೆ ಯಾವತ್ತೂ ತಪ್ಪಿಲ್ಲ ಎಂದು ಸೋಮಶೇಖರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More