ರಾಜ್ಯ ಬಿಜೆಪಿಗೆ ‘ರಾಜ’ಕಳೆ! ಯದುವೀರ್ ರನ್ನು ಬಿಜೆಪಿ ಕಚೇರಿಗೆ ಬರಮಾಡಿಕೊಂಡ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

|

Updated on: Mar 14, 2024 | 2:23 PM

ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕಟ್ ಸಿಗಲಾರದು ಅನ್ನೋ ವಿಷಯ ಹತ್ತು-ಹದಿನೈದುಗಳಷ್ಟು ಮೊದಲೇ ಗೊತ್ತಾಗಿತ್ತು. ಪ್ರತಾಪ್ ಟಿಕೆಟ್ ಪಡೆಯಲು ಶತಾಯ ಗತಾಯ ಪ್ರಯತ್ನ ಮಾಡಿದ್ದು ನಿಷ್ಫಲಗೊಂಡಿತು. ಸಾಮಾಜಿಕ ಜಾಲತಾಣವೊಂದರಲ್ಲಿ ಲೈವ್ ಆಗಿ ಅವಲತ್ತುಕೊಂಡಿದ್ದು ಕೂಡ ನೆರವಿಗೆ ಬರಲಿಲ್ಲ. ಮಾಧ್ಯಮದವರೊಡನೆ ಗದ್ಗದಿತ ಸ್ವರದಲ್ಲಿ ಮಾತಾಡಿದ್ದು ವರಿಷ್ಠರು ಸಹ ಕೇಳಿಸಿಕೊಂಡಿರುತ್ತಾರೆ.

ಬೆಂಗಳೂರು: ರಾಜ್ಯ ಬಿಜೆಪಿಗೆ ‘ರಾಜ’ ಕಳೆ ಬಂದಿದೆ! ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿ ಯದುವೀರ್ ಕೃಷ್ಣದತ್ ಒಡೆಯರ್​ಗೆ (Yaduveer Krishna Dutt Wodeyar) ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಇಂದು ಯದುವೀರ್ ಅವರನ್ನು ನಗರದ ಮಲ್ಲೇಶ್ವರಂನ್ಲಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಬರಮಾಡಿಕೊಳ್ಳಲಾಯಿತು. ವಿಜಯೇಂದ್ರ ಕಚೇರಿಯಲ್ಲಿ ಹಾಜರಿದ್ದು ಪಕ್ಷದ ಹೊಸ ಸದಸ್ಯನನ್ನು ಸ್ವಾಗತಿಸಿದರು. ಯದುವೀರ್ ಒಳಗೆ ಪ್ರವೇಶಿಸಿದ  ಬಳಿಕ ಭಾರತಾಂಬೆಯ ಫೋಟೋಗೆ ಪುಷ್ಪಾರ್ಚನೆ ಮಾಡಿ ನಮಸ್ಕರಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ರಾಜ್ಯದ ಜನತೆಯಲ್ಲಿ ತೀವ್ರ ಕುತೂಹಲ ಕೆರಳಿಸಿತ್ತು. ಹಾಗೆ ನೋಡಿದರೆ, ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕಟ್ ಸಿಗಲಾರದು ಅನ್ನೋ ವಿಷಯ ಹತ್ತು-ಹದಿನೈದುಗಳಷ್ಟು ಮೊದಲೇ ಗೊತ್ತಾಗಿತ್ತು. ಪ್ರತಾಪ್ ಟಿಕೆಟ್ ಪಡೆಯಲು ಶತಾಯ ಗತಾಯ ಪ್ರಯತ್ನ ಮಾಡಿದ್ದು ನಿಷ್ಫಲಗೊಂಡಿತು. ಸಾಮಾಜಿಕ ಜಾಲತಾಣವೊಂದರಲ್ಲಿ ಲೈವ್ ಆಗಿ ಅವಲತ್ತುಕೊಂಡಿದ್ದು ಕೂಡ ನೆರವಿಗೆ ಬರಲಿಲ್ಲ. ಮಾಧ್ಯಮದವರೊಡನೆ ಗದ್ಗದಿತ ಸ್ವರದಲ್ಲಿ ಮಾತಾಡಿದ್ದು ವರಿಷ್ಠರು ಸಹ ಕೇಳಿಸಿಕೊಂಡಿರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್ ಮುಖಂಡ ಮನೋಹರ್ ತಹಶೀಲ್ದಾರ್