ಮುಂಬರುವ ಲೋಕ ಸಭಾ ಚುನಾವಣೆ ಬಗ್ಗೆ ಚರ್ಚಿಸಲು ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆಯಲಾಗಿದೆ: ಡಿಕೆ ಶಿವಕುಮಾರ್, ಡಿಸಿಎಂ
ಕೇವಲ ಕರ್ನಾಟಕದ ನಾಯಕರನ್ನು ಮಾತ್ರ ಕರೆದಿಲ್ಲ, ಬೇರೆ ಬೇರೆ ರಾಜ್ಯಗಳ ನಾಯಕರನ್ನೂ ಕರೆಯಲಾಗಿದೆ, ನಾಳೆ ಕೇರಳದ ನಾಯಕರು ದೆಹಲಿಗೆ ಆಗಮಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ದೆಹಲಿ: ಪಕ್ಷದ ಹೈಕಮಾಂಡ್ (Congress high command) ಯಾಕೆ ರಾಜ್ಯ ನಾಯಕರನ್ನು ದೆಹಲಿಗೆ ಕರೆದಿದೆ ಅನ್ನೋದನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿಳಿಸಿದರು. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಅಸಲಿಗೆ ಈಗ ಕರೆದಿರುವ ಸಭೆ ಬೆಂಗಳೂರಲ್ಲೇ ನಡೆಯಬೇಕಿತ್ತು ಆದರೆ, ಪಕ್ಷದ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ (Oommen Chandy) ಅವರ ನಿಧನದಿಂದಾಗಿ ಮುಂದೂಡಬೇಕಾಯಿತು. ಇವತ್ತು ಆ ಸಭೆ ನಡೆಯಲಿದ್ದು ರಾಜ್ಯದ ಸುಮಾರು 38 ನಾಯಕರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಸಭೆಯಲ್ಲಿ ಮುಂಬರುವ ಲೋಕ ಸಭಾ ಚುನಾವಣೆ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ ಶಿವಕುಮಾರ್, ಕೇವಲ ಕರ್ನಾಟಕದ ನಾಯಕರನ್ನು ಮಾತ್ರ ಕರೆದಿಲ್ಲ, ಬೇರೆ ಬೇರೆ ರಾಜ್ಯಗಳ ನಾಯಕರನ್ನೂ ಕರೆಯಲಾಗಿದೆ, ನಾಳೆ ಕೇರಳದ ನಾಯಕರು ದೆಹಲಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ