ಮಹಾರಾಷ್ಟ್ರದಲ್ಲಿ KSRTC ಬಸ್ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು, ಬಸ್ ಮುಂಭಾಗದ ಗಾಜು ಜಖಂ
ಮಿರಜ್-ಕಾಗವಾಡ ಮಾರ್ಗ ಮಧ್ಯೆ ಸಾಗುವ ಕರ್ನಾಟಕ ಸಾರಿಗೆ ಬಸ್ ಮೇಲೆ ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.
ಬೆಳಗಾವಿ: ಮಿರಜ್-ಕಾಗವಾಡ ಮಾರ್ಗ ಮಧ್ಯೆ ಸಾಗುವ ಕರ್ನಾಟಕ ಸಾರಿಗೆ ಬಸ್ ಮೇಲೆ ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಡಿಪೋಗೆ ಸೇರಿದ KSRTC ಬಸ್ ಪುಣೆಯಿಂದ ಅಥಣಿಗೆ ಬರುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇದರಿಂದ ಕೆಎಸ್ಆರ್ಟಿಸಿ ಬಸ್ ಮುಂಭಾಗದ ಗಾಜು ಜಖಂಗೊಂಡಿದೆ. ಕಲ್ಲು ತೂರಾಟ ಹಿನ್ನೆಲೆ ಕರ್ನಾಟಕ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.
Published on: Nov 26, 2022 01:30 PM