ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು

Updated on: Sep 03, 2025 | 9:42 PM

ಯೂಟ್ಯೂಬ್​​​ನಲ್ಲಿ ಕನ್ನಡದ ಹಲವು ಕಿರುಚಿತ್ರಗಳು ಜನಮನ ಗೆದ್ದಿವೆ. ಕಾಮಿಡಿ ಕಥಾಹಂದರ ಇಟ್ಟುಕೊಂಡ ಕಿರುಚಿತ್ರಗಳನ್ನು ಪ್ರೇಕ್ಷಕರು ನೋಡಿ ಇಷ್ಟಪಟ್ಟಿದ್ದಾರೆ. ‘ಅಮೃತಾಂಜನ್’ ಶಾರ್ಟ್​ ಫಿಲ್ಮ್ ಮೂಲಕ ಸದ್ದು ಮಾಡಿದ ಸುಧಾಕರ, ಕಾರ್ತಿಕ್, ಪಾಯಲ್ ಜಂಗಪ್ಪ, ಗೌರವ್ ಮುಂತಾದವರು ಈಗ ಮತ್ತೆ ಜೊತೆಯಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಕನ್ನಡದ ಹಲವು ಕಿರುಚಿತ್ರಗಳು ಯೂಟ್ಯೂಬ್ ಮೂಲಕ ಜನಮನ ಗೆದ್ದಿವೆ. ಕಾಮಿಡಿ ಕಥಾಹಂದರ ಹೊಂದಿರುವ ಕಿರುಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ‘ಅಮೃತಾಂಜನ್’ (Amruta Anjan) ಶಾರ್ಟ್​ ಫಿಲ್ಮ್ ಮೂಲಕ ಸದ್ದು ಮಾಡಿದ ಸುಧಾಕರ್, ಪಾಯಲ್ ಜಂಗಪ್ಪ, ಗೌರವ್, ಕಾರ್ತಿಕ್ ಮುಂತಾದವರು ಈಗ ಮತ್ತೆ ಜೊತೆಯಾಗಿ ಸಿನಿಮಾ ಮಾಡಲು ಮುಂತಾಗಿದ್ದಾರೆ. ಈ ಚಿತ್ರಕ್ಕೂ ‘ಅಮೃತಾ ಅಂಜನ್’ ಎಂದು ಶೀರ್ಷಿಕೆ ಇಡಲಾಗಿದೆ. ತಮ್ಮ ಟೀಮ್ ಹಾಗೂ ಪ್ರಯತ್ನದ ಬಗ್ಗೆ ಸುಧಾಕರ್ (Sudhakar Gowda) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More