Raichur: ನೆಚ್ಚಿನ ಶಿಕ್ಷಕನ ವರ್ಗಾವಣೆ ಸಹಿಸಲಾಗದೇ ಕಣ್ಣೀರಿಟ್ಟ ವಿದ್ಯಾರ್ಥಿಗಳು; ವಿಡಿಯೋ ವೈರಲ್​

|

Updated on: Jun 24, 2023 | 10:33 AM

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಜಲದುರ್ಗ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕನ ವರ್ಗಾವಣೆ ಸಹಿಸಲಾಗದೇ ವಿದ್ಯಾರ್ಥಿಗಳು ಕಣ್ಣೀರಿಟ್ಟ ಘಟನೆ ನಡೆದಿದೆ.

ರಾಯಚೂರು: ಶಿಕ್ಷಕರು ಮಕ್ಕಳ ನಡುವಣ ಬಾಂಧವ್ಯಕ್ಕೆ ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಜಲದುರ್ಗ ಗ್ರಾಮ ಸಾಕ್ಷಿಯಾಗಿದೆ.  ಇತ್ತೀಚೆಗೆ ಜಲದುರ್ಗ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಮಹೇಶ್ ಕುಮಾರ್ ಅವರು ಯಳಗುಂದ ಶಾಲೆಗೆ ವರ್ಗಾವಣೆಯಾಗಿದ್ದರು. ಅದರಂತೆ ಜಲದುರ್ಗ ಗ್ರಾಮದ ಶಾಲೆಯಿಂದ ಇಂದು(ಜೂ.24) ವಿದ್ಯಾರ್ಥಿಗಳು ಶಿಕ್ಷಕನ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ತಮ್ಮ ನೆಚ್ಚಿನ ಶಿಕ್ಷಕನನ್ನ ಬಿಡದೇ ವಿದ್ಯಾರ್ಥಿಗಳು ತಬ್ಬಿಕೊಂಡು ಕಣ್ಣೀರಿಟ್ಟ ಘಟನೆ ನಡೆಯಿತು. ಹೌದು ಸರ್​ ತಬ್ಬಿಕೊಂಡು ಹೋಗಬೇಡಿ ಸರ್ ಎಂದು ಕಣ್ಣೀರಿಟ್ಟಿದ್ದು, ಮಕ್ಕಳು ಅಳುವುದನ್ನ ನೋಡಿದ ಶಿಕ್ಷಕ ಮಹೇಶ್ ಕುಮಾರ್ ಕೂಡ ಭಾವುಕರಾದರು. ಸದ್ಯ ಮಕ್ಕಳು ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ