ಸುದೀಪ್ ನಟನೆಯ ‘ಮಾರ್ಕ್’ ಟೈಟಲ್ ವಿವಾದ: ಚೇಂಬರ್ ಅಧ್ಯಕ್ಷರು ಹೇಳಿದ್ದೇನು?
Mark movie of Sudeep: ಸುದೀಪ್ ಅವರ 47ನೇ ಸಿನಿಮಾ ಆಗಿ ಮಾರ್ಕ್ ಮೂಡಿ ಬರಲಿದೆ. ಸಿನಿಮಾದ ಟೈಟಲ್ ಅನ್ನು ಅವರ ಹುಟ್ಟುಹಬ್ಬದಂದು ಘೋಷಣೆ ಮಾಡಲಾಗಿದೆ. ಆದರೆ ಆ ಟೈಟಲ್ ನಮಗೆ ಸೇರಿದ್ದು ಎಂದು ಕೆಲವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. ಇದೀಗ ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಈ ವಿವಾದದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್ (Sudeep) ನಟನೆಯ ‘ಮಾರ್ಕ್’ ಸಿನಿಮಾ ಇತ್ತೀಚೆಗಷ್ಟೆ ಘೋಷಣೆಯಾಗಿದೆ. ಸಿನಿಮಾಕ್ಕಾಗಿ ಭಿನ್ನ ಹೇರ್ಸ್ಟೈಲ್ ಅನ್ನು ಸುದೀಪ್ ಮಾಡಿಸಿಕೊಂಡಿದ್ದಾರೆ. ಈ ಹಿಂದೆ ‘ಮ್ಯಾಕ್ಸ್’ ಆಗಿದ್ದ ಸುದೀಪ್ ಈಗ ‘ಮಾರ್ಕ್’ ಆಗಿದ್ದಾರೆ. ಸುದೀಪ್ ಅವರ 47ನೇ ಸಿನಿಮಾ ಇದಾಗಿರಲಿದೆ. ಸಿನಿಮಾದ ಹೆಸರು ಘೋಷಣೆಯಾದ ಬೆನ್ನಲ್ಲೆ ಸಿನಿಮಾದ ಟೈಟಲ್ ಬಗ್ಗೆ ವಿವಾದ ಎದ್ದಿದೆ. ಗೌರವ್ ಫಿಲಮ್ಸ್ ಎಂಬುವರು ‘ಮಾರ್ಕ್’ ಟೈಟಲ್ ನಮ್ಮದು ಎಂದಿದ್ದಾರೆ. ಈ ವಿವಾದದ ಬಗ್ಗೆ ಫಿಲಂ ಚೇಂಬರ್ ಅಧ್ಯಕ್ಷ ಎಂ ನರಸಿಂಹಲು ಟಿವಿ9 ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
