‘ಸೋತವರು, ಗೆದ್ದವರು ಎಲ್ಲರಿಗೂ ಆಮಂತ್ರಣ ಕೊಟ್ಟಿದ್ದೇವೆ’; ಅಭಿ-ಅವಿವ ಮದುವೆ ಬಗ್ಗೆ ಸುಮಲತಾ ಮಾತು

|

Updated on: May 30, 2023 | 8:38 AM

ಅಭಿಷೇಕ್ ಹಾಗೂ ಅವಿವ ಬಿಡಪ ಮದುವೆ ಜೂನ್ 5ರಂದು ನಡೆಯುತ್ತಿದೆ. ಜೂನ್ 7ರಂದು ಆರತಕ್ಷತೆ ನಡೆಯಲಿದೆ. ಯಾರಿಗೆಲ್ಲ ಆಮಂತ್ರಣ ಹೋಗಿದೆ ಎನ್ನುವ ಬಗ್ಗೆ ಸುಮಲತಾ ಅಂಬರೀಷ್ ಮಾಹಿತಿ ನೀಡಿದ್ದಾರೆ.

ನಟಿ, ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಅವರು ಸದ್ಯ ಮಗ ಅಭಿಷೇಕ್ ಅಂಬರೀಷ್ ಅವರ ಮದುವೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅಭಿಷೇಕ್ ಹಾಗೂ ಅವಿವ ಬಿಡಪ ಮದುವೆ ಜೂನ್ 5ರಂದು ನಡೆಯುತ್ತಿದೆ. ಜೂನ್ 7ರಂದು ಆರತಕ್ಷತೆ ನಡೆಯಲಿದೆ. ಯಾರಿಗೆಲ್ಲ ಆಮಂತ್ರಣ ಹೋಗಿದೆ ಎನ್ನುವ ಬಗ್ಗೆ ಸುಮಲತಾ ಅಂಬರೀಷ್ ಮಾಹಿತಿ ನೀಡಿದ್ದಾರೆ. ‘ನಾವು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ವಿರೋಧ ಪಕ್ಷ, ಆಡಳಿತ ಪಕ್ಷ, ಸೋತವರು, ಗೆದ್ದವರು.. ಹೀಗೆ ಒಬ್ಬರನ್ನೂ ಬಿಡದೆ ಆಮಂತ್ರಿಸಿದ್ದೇವೆ’ ಎಂದಿದ್ದಾರೆ ಸುಮಲತಾ ಅಂಬರೀಷ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ